➤ ದೇಶದ ರಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ವಲಯಕ್ಕೆ ಹೊಸ ಉತ್ತೇಜನ ನೀಡಲು ಹಾಗೂ ಜಾಗತಿಕ ಮಟ್ಟದಲ್ಲಿ ಭಾರತೀಯ ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು 'ಭವ್ಯ-ರಸಾಯನ' (BHAVYA Rasayan) ಯೋಜನೆಗೆ ಅನುಮೋದನೆ ನೀಡಿದೆ.
➤ ಆರ್ಥಿಕ ಹಂಚಿಕೆ ಮತ್ತು ರಚನೆ (Financial Outlay):
  • ಸಾಮಾನ್ಯ ಮೂಲಸೌಕರ್ಯ ಅಭಿವೃದ್ಧಿ: ₹3,000 ಕೋಟಿಯನ್ನು ಉದ್ಯಾನಗಳ ಒಳಗೆ ಸಾಮಾನ್ಯ ಮೂಲಭೂತ ಸೌಕರ್ಯಗಳು ಮತ್ತು ಮೂಲ ಸೌಲಭ್ಯಗಳ ಸ್ಥಾಪನೆಗೆ ವಿನಿಯೋಗಿಸಲಾಗುತ್ತದೆ.
  • ಆಡಳಿತಾತ್ಮಕ ವೆಚ್ಚ: ಯೋಜನೆ ಅನುಷ್ಠಾನ ಹಾಗೂ ನಿರ್ವಹಣೆಯ ಆಡಳಿತಾತ್ಮಕ ವೆಚ್ಚಕ್ಕಾಗಿ ₹30 ಕೋಟಿ ಕಾಯ್ದಿರಿಸಲಾಗಿದೆ.
  • ಅನುದಾನ ಹಂಚಿಕೆ: ಕೇಂದ್ರ ಸರ್ಕಾರವು ಪ್ರತಿ ಉದ್ಯಾನಕ್ಕೆ ₹1,000 ಕೋಟಿ ವರೆಗೆ ಅನುದಾನ ಒದಗಿಸುತ್ತದೆ. ಇದಕ್ಕೆ ಪ್ರತಿಯಾಗಿ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಕನಿಷ್ಠ ₹500 ಕೋಟಿ ವಂತಿಕೆ ನೀಡುವುದು ಕಡ್ಡಾಯವಾಗಿದೆ.
➤ ಸ್ಥಳ ಆಯ್ಕೆ ಮತ್ತು ಭೂಮಿಯ ಮಾನದಂಡ: 
  • ಚಾಲೆಂಜ್ ರೂಟ್ (Challenge Route): ಈ ಮೂರು ಕೆಮಿಕಲ್ ಪಾರ್ಕ್‌ಗಳನ್ನು 'ಸ್ಪರ್ಧಾತ್ಮಕ ಮಾದರಿ' (Challenge-based selection process) ಮೂಲಕ ರಾಜ್ಯ ಸರ್ಕಾರಗಳಿಂದ ಆಯ್ಕೆ ಮಾಡಲಾಗುತ್ತದೆ.
  • ಭೂಮಿಯ ವಿಸ್ತೀರ್ಣ: ಪ್ರತಿಯೊಂದು ಉದ್ಯಾನವೂ ಕನಿಷ್ಠ 8 ಚದರ ಕಿಲೋಮೀಟರ್ (2,000 ಎಕರೆ) ನಷ್ಟು ನಿರಂತರ, ವ್ಯಾಜ್ಯರಹಿತ (encumbrance-free) ಭೂಮಿಯನ್ನು ಹೊಂದಿರಬೇಕು.
➤ ಪಾರ್ಕ್‌ಗಳ ತಾಂತ್ರಿಕ ವೈಶಿಷ್ಟ್ಯಗಳು:
  • ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು (CETP - Common Effluent Treatment Plants).
  • ಅಪಾಯಕಾರಿ ತ್ಯಾಜ್ಯ ನಿರ್ವಹಣೆ ಮತ್ತು ಸಂಗ್ರಹಣಾ ಘಟಕಗಳು (TSDF).
  • ದ್ರಾವಕ ಮರುಪಡೆಯುವಿಕೆ (Solvents Recovery) ಮತ್ತು ಶುದ್ಧೀಕರಣ ಘಟಕಗಳು.
  • ಸಂಪರ್ಕಿತ ಪೈಪ್‌ಲೈನ್ ನೆಟ್‌ವರ್ಕ್ ಮತ್ತು ಉಗಿ (Steam) ಉತ್ಪಾದನಾ ವ್ಯವಸ್ಥೆ.
  • ಸಾರಿಗೆ ಮತ್ತು ಉಗ್ರಾಣ (Logistics & Warehousing) ಸೌಲಭ್ಯಗಳು.
➤ ಈ ಯೋಜನೆಯ ಪ್ರಮುಖ ಪ್ರಯೋಜನಗಳು:
  • ಸರಕು ಸಾಗಣೆ ವೆಚ್ಚ ಕಡಿತ: ಪೂರಕ ಉದ್ಯಮಗಳು (Upstream & Downstream industries) ಒಂದೇ ಸೂರಿನಡಿ ಬರುವುದರಿಂದ ಲೊಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗುತ್ತದೆ.
  • ಆತ್ಮನಿರ್ಭರ ಭಾರತಕ್ಕೆ ಬಲ: ಆಮದು ಮೇಲಿನ ಅವಲಂಬನೆ ತಗ್ಗಿಸಿ, ದೇಶೀಯ ಉತ್ಪಾದನೆ ಮತ್ತು ರಫ್ತು ಪ್ರಮಾಣವನ್ನು ಹೆಚ್ಚಿಸುತ್ತದೆ.
  • ಪರಿಸರ ಸಂರಕ್ಷಣೆ: ಕೇಂದ್ರೀಕೃತ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಯಿಂದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಸುಲಭವಾಗಿ ಪಾಲಿಸಬಹುದು.
  • ವಿಕ್ಷಿತ್ ಭಾರತ್ @ 2047 ಉದ್ದೇಶ: ಕೃಷಿ, ಜವಳಿ, ಔಷಧ (Pharmaceuticals), ಆಟೋಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳಿಗೆ ಅಗತ್ಯ ರಸಾಯನಿಕಗಳ ಪೂರೈಕೆಯನ್ನು ಬಲಪಡಿಸುವ ಮೂಲಕ ಹೊಸ ಉದ್ಯೋಗ ಸೃಷ್ಟಿಗೆ ನೆರವಾಗುತ್ತದೆ.