* ತೆಲಂಗಾಣದ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಗಡ್ಡಂ ಪ್ರಸಾದ್ ಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
* ಶಾಸಕ ಗಡ್ಡಂ ಪ್ರಸಾದ್ ಅವರ ಹೆಸರನ್ನು ಸ್ಪೀಕರ್ ಹುದ್ದೆಗೆ ಹೈಕಮಾಂಡ್ ನಾಮನಿರ್ದೇಶನ ಮಾಡಿತು. ದಲಿತ ನಾಯಕರಾಗಿರುವ ಪ್ರಸಾದ್ ಅವರ ರಾಜಕೀಯ ಅನುಭವವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಕೊಳ್ಳಲಾಗಿದೆ.
* ಹಂಗಾಮಿ ಸ್ಪೀಕರ್ ಅಕ್ಬರುದ್ದೀನ್ ಓವೈಸಿ ಅವರು ನೂತನ ಸ್ಪೀಕರ್ ಗಡ್ಡಂ ಪ್ರಸಾದ್ ಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
* ಇತ್ತೀಚಿನ ಚುನಾವಣೆಯಲ್ಲಿ ವಿಕಾರಾಬಾದ್ ಕ್ಷೇತ್ರದಿಂದ ಆಯ್ಕೆಯಾದ ಪ್ರಸಾದ್ ಅವರು, ಆಂಧ್ರಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
* ಪ್ರಸಾದ್ ಕುಮಾರ್ ಅವರು ವಿಕಾರಾಬಾದ್ ಜಿಲ್ಲೆಯನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಿಳಿಸಿದ್ದಾರೆ.
* ಪ್ರಸಾದ್ ಕುಮಾರ್ ಅವರು ಎಂಪಿಟಿಎಸ್ ಸದಸ್ಯರಾಗಿ ತಮ್ಮ ರಾಜಕೀಯ ವ್ಯತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 2008 ರಲ್ಲಿ ವಿಧಾನಸಭಾ ಉಪಚುನಾವಣೆಯಲ್ಲಿ ಗೆದ್ದು 2009 ರಲ್ಲಿ ಪುನರಾಯ್ಕೆಗೊಂಡು ಸಚಿವರಾದರು. ಇತ್ತೀಚಿನ ಚುನಾವಣೆಯಲ್ಲಿ ವಿಕಾರಾಬಾದ್‌ನಿಂದ ಮತ್ತೂಮ್ಮೆ ಆಯ್ಕೆಯಾಗಿದ್ದರು.
ತೆಲಂಗಾಣದ ನೂತನ ಸ್ಪೀಕರ್ ಆಗಿ ಗಡ್ಡಂ ಪ್ರಸಾದ್ ಅವಿರೋಧವಾಗಿ ಆಯ್ಕೆ
Published by Akshata Halli
15 ಡಿಸೆಂಬರ್ 2023