* ಚೀನಾ ಹಾಗೂ ತೈವಾನ್ ನಡುವಿನ ತೈವಾನ್ ಜಲಸಂಧಿ ಪ್ರದೇಶದಲ್ಲಿ ಅಕ್ಟೋಬರ್ 14 ರಂದು (ಸೋಮವಾರ) ಚೀನಾ ಅತಿ ದೊಡ್ಡ ಸಮರಾಭ್ಯಾಸ ನಡೆಸಿತು. 'ತವಾನ್‌ನ 'ಪ್ರತ್ಯೇಕತಾವಾದ'ಕ್ಕೆ ತೀವ್ರ ಎಚ್ಚರಿಕೆ ನೀಡುವ ಉದ್ದೇಶದಿಂದ ಸಮರಾಭ್ಯಾಸ ನಡೆಸಲಾಯಿತು' ಎಂದು ಚೀನಾ ತಿಳಿಸಿದೆ.
* ಯುದ್ಧವಿಮಾನ ವಾಹಕ ನೌಕೆ, ಯುದ್ಧ ವಿಮಾನಗಳ ಮೂಲಕ ಚೀನಾವು ತೈವಾನ್ ಅನ್ನು ಸುತ್ತುವರಿದಿತ್ತು.
* 'ತೈವಾನ್ ಚೀನಾದ ಭಾಗ ಎಂದು ಒಪ್ಪಿಕೊಳ್ಳಲು ಆ ದೇಶದ ಅಧ್ಯಕ್ಷ ಲಾಯ್ ಚಿಂಗ್-ಟೆ ಅವರು ನಿಕಾರಿಸಿದ್ದಾರೆ. ಆದ್ದರಿಂದಲೇ ನಾವು ಸಮರಾಭ್ಯಾಸ ನಡೆಸುತ್ತಿದ್ದೇವೆ' ಎಂದು ಚೀನಾದ ರಕ್ಷಣಾ ಸಚಿವಾಲಯ ಈ ಮೊದಲು ತಿಳಿಸಿತ್ತು.
* 8ನೇ ಆರ್ಮಿಕಾರ್ಪ್ಸ್ ತುಕಡಿ ಗುರುವಾರ ಹೊವಿಟ್ಝರ್ಸ್ ಫಿರಂಗಿಗಳ ಮೂಲಕ ಉದ್ದೇಶಿತ ಗುರಿಗೆ ದಾಳಿ ನಡೆಸುವ ರಕ್ಷಣಾತ್ಮಕ ‘ಲೈವ್ ಫೈರ್’ (ಜೀವಂತ ಮದ್ದುಗುಂಡು, ಫಿರಂಗಿ ಬಳಸಿ ಬಳಸಿ ಅಭ್ಯಾಸ) ಸಮರಾಭ್ಯಾಸ ನಡೆಸಲಾಗಿದೆ. ದಕ್ಷಿಣದ ತುದಿಯಲ್ಲಿರುವ ಪಿಂಗ್ಟುಂಗ್ನಲ್ಲಿ 1 ಗಂಟೆ ಸಮರಾಭ್ಯಾಸ ನಡೆದಿದೆ.
* ಚೀನಾದ ಸಮರಾಭ್ಯಾದ ಕುರಿತು ತೈವಾನ್‌ನ ಭದ್ರತಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಜೋಸೆಫ್ ವು. 'ಚೀನಾ ಬೆದರಿಕೆಗೆ ನಮ್ಮ ಸೇನೆಯು ತಕ್ಕ ಉತ್ತರ ನೀಡಲಿದೆ' ಎಂದಿದ್ದಾರೆ. 'ಇದೊಂದು ಅನಗತ್ಯ ಹಾಗೂ ಭಯದ ವಾತಾವರಣವನ್ನು ಹರಡುವ ಪ್ರಕ್ರಿಯೆ' ಎಂದು ಅಮೆರಿಕವು ಚೀನಾದ ಸಮರಾಭ್ಯಾಸದ ಕುರಿತು ಪ್ರಕ್ರಿಯಿಸಿತ್ತು.
* ಈ ಸಮರಾಭ್ಯಾಸವು 125 ಯುದ್ಧವಿಮಾನ, 7 ಯುದ್ಧನೌಕೆ, 4 ಹಡಗುಗಳ ಮೂಲಕ ಚೀನಾ ಸಮರಾಭ್ಯಾಸ ನಡೆಸಿತ್ತು ಎಂದು ತೈವಾನ್ ತಿಳಿಸಿದೆ.
ಬುಧವಾರ, 16 ಅಕ್ಟೋಬರ್ 2024
11:21 ಪೂರ್ವಾಹ್ನ
Daily PDF
ತೈವಾನ್ ಜಲಸಂಧಿ : ಸಮರಾಭ್ಯಾಸ ನಡೆಸಿದ ಚೀನಾದ ಯುದ್ಧನೌಕೆ
Authored by:
Bhagya R K