- ಅತ್ಯಂತ ಕಿರಿಯ ಆಟಗಾರ್ತಿ: ಕೇವಲ 17 ವರ್ಷ 222 ದಿನಗಳ ವಯಸ್ಸಿನಲ್ಲಿ ತೈಪೇ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ಈ ಟೂರ್ನಿಯ ಇತಿಹಾಸದಲ್ಲೇ ಚಾಂಪಿಯನ್ ಆದ ಅತ್ಯಂತ ಕಿರಿಯ ಆಟಗಾರ್ತಿ (Youngest Champion) ಎಂಬ ಹೆಗ್ಗಳಿಕೆಗೆ ತನ್ವಿ ಪಾತ್ರರಾಗಿದ್ದಾರೆ. ಈ ಹಿಂದೆ ತೈವಾನ್‌ನ ದಿಗ್ಗಜ ಆಟಗಾರ್ತಿ ತೈ ತ್ಸು ಯಿಂಗ್ (Tai Tzu Ying) ಹೆಸರಲ್ಲಿದ್ದ ದಾಖಲೆಯನ್ನು ತನ್ವಿ ಮುರಿದಿದ್ದಾರೆ.
- ಸೈನಾ ನೆಹ್ವಾಲ್ ನಂತರದ ಮೊದಲ ಭಾರತೀಯಳೆ: 2008ರಲ್ಲಿ ಭಾರತದ ಸೈನಾ ನೆಹ್ವಾಲ್ ಈ ಟೂರ್ನಿ ಗೆದ್ದಿದ್ದರು. 18 ವರ್ಷಗಳ ನಂತರ ತೈಪೇ ಓಪನ್ ಮಹಿಳಾ ಸಿಂಗಲ್ಸ್ ಶೀರ್ಷಿಕೆ ಜಯಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ತನ್ವಿ ಪಾತ್ರರಾಗಿದ್ದಾರೆ.
- ಎಲೈಟ್ ಪಟ್ಟಿಗೆ ಸೇರ್ಪಡೆ: ಬಿಡಬ್ಲ್ಯೂಎಫ್ ಸೂಪರ್ 300 ಅಥವಾ ಅದಕ್ಕಿಂತ ಹೆಚ್ಚಿನ ದರ್ಜೆಯ ಟೂರ್ನಿ ಜಯಿಸಿದ ಭಾರತದ 4ನೇ ಮಹಿಳಾ ಸಿಂಗಲ್ಸ್ ಆಟಗಾರ್ತಿ ತನ್ವಿ ಶರ್ಮಾ. (ಇತರರು: ಸೈನಾ ನೆಹ್ವಾಲ್, ಪಿ.ವಿ. ಸಿಂಧು, ದೇವಿಕಾ ಸಿಹಾಗ್).
- ಕೋಚ್: ದಕ್ಷಿಣ ಕೊರಿಯಾದ ಮಾಜಿ ಆಟಗಾರ ಹಾಗೂ ಪಿ.ವಿ. ಸಿಂಧು ಅವರ ಮಾಜಿ ತರಬೇತುದಾರರಾದ ಪಾರ್ಕ್ ತೇ-ಸಾಂಗ್ (Park Tae-sang) ಅವರು ತನ್ವಿ ಶರ್ಮಾ ಅವರ ತರಬೇತುದಾರರಾಗಿದ್ದಾರೆ.
➤ ಫೈನಲ್ ಪಂದ್ಯದಲ್ಲಿ ಆರನೇ ಶ್ರೇಯಾಂಕದ ವಿಯೆಟ್ನಾಂ ಆಟಗಾರ್ತಿ ನುಯೆನ್ ತುಯ್ ಲಿನ್ ವಿರುದ್ಧ ಅತ್ಯಂತ ಚಾಣಾಕ್ಷ ಪ್ರದರ್ಶನ ನೀಡಿದ ಪಂಜಾಬ್‌ನ ಹೊಶಿಯಾರ್‌ಪುರದ ತನ್ವಿ ಶರ್ಮಾ, ಆರಂಭದಿಂದಲೇ ಆಕ್ರಮಣಕಾರಿ ಡ್ರಾಪ್ ಶಾಟ್‌ಗಳು ಹಾಗೂ ಕ್ರಾಸ್-ಕೋರ್ಟ್ ಸ್ಮ್ಯಾಶ್‌ಗಳ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಕೇವಲ 36 ನಿಮಿಷಗಳಲ್ಲಿ 21-16, 21-16 ನೇರ ಗೇಮ್‌ಗಳಿಂದ ಜಯ ಸಾಧಿಸಿ ಟ್ರೋಫಿ ಎತ್ತಿಹಿಡಿದರು.
➤ ತನ್ವಿ ಶರ್ಮಾ ಅವರ ಇತರ ಪ್ರಮುಖ ಸಾಧನೆಗಳು:
- ವರ್ಲ್ಡ್ ಜೂನಿಯರ್ ಚಾಂಪಿಯನ್‌ಶಿಪ್: ಒಂದೇ ಆವೃತ್ತಿಯ ಬಿಡಬ್ಲ್ಯೂಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಪದಕಗಳನ್ನು (ಮಹಿಳಾ ಸಿಂಗಲ್ಸ್‌ನಲ್ಲಿ ಬೆಳ್ಳಿ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಕಂಸ) ಗೆದ್ದ ಮೊದಲ ಭಾರತೀಯ ಆಟಗಾರ್ತಿ.
- ಏಷ್ಯನ್ ಟೀಮ್ ಚಾಂಪಿಯನ್‌ಶಿಪ್: ಭಾರತ ತಂಡವು ಇತಿಹಾಸದಲ್ಲೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದ ಏಷ್ಯನ್ ಟೀಮ್ ಚಾಂಪಿಯನ್‌ಶಿಪ್ ತಂಡದ ಸದಸ್ಯೆಯಾಗಿದ್ದರು.
- ರ್ಯಾಂಕಿಂಗ್: ಈ ಹಿಂದೆ ಜೂನಿಯರ್ ವಿಭಾಗದಲ್ಲಿ ವಿಶ್ವದ 1ನೇ ಶ್ರೇಯಾಂಕದ (World Junior No. 1) ಆಟಗಾರ್ತಿಯಾಗಿದ್ದರು.