* ‘ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಆಗ್ರಾದ ತಾಜ್ ಮಹಲ್ ನೋಡಲು ಬರುವ ಪ್ರವಾಸಿಗರಿಂದ ಭಾರತೀಯ ಪುರಾತತ್ವ ಇಲಾಖೆ (ASI)ಗೆ ಅತಿ ಹೆಚ್ಚು ವರಮಾನ ಸಂಗ್ರಹವಾಗುತ್ತಿದೆ’ ಎಂದು ಸರ್ಕಾರ ದಾಖಲೆ ಬಿಡುಗಡೆ ಮಾಡಿದೆ.
* ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜ್ಯಸಭೆಗೆ ಮಾಹಿತಿ ನೀಡಿ, ‘ಕಳೆದ ಐದು ವರ್ಷಗಳಲ್ಲಿ ₹297 ಕೋಟಿ ಆದಾಯ ಸಂಗ್ರಹವಾಗಿದೆ’ ಎಂದಿದ್ದಾರೆ.
* 2023-24ನೇ ಹಣಕಾಸು ವರ್ಷದಲ್ಲಿ ದೆಹಲಿಯ ಕುತುಬ್ ಮಿನಾರ್ ಮತ್ತು ಕೆಂಪು ಕೋಟೆ ಕ್ರಮವಾಗಿ 23,80,16,983 ರೂ. ಮತ್ತು 18,08,90,825 ರೂ. ಆದಾಯ ಗಳಿಸುವ ಮೂಲಕ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿವೆ.
* 17ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಶಹ ಜಹಾನ್ ತಾಜ್ ಮಹಲ್ ನಿರ್ಮಿಸಿದರು. ಜಗತ್ತಿನ ಏಳು ಅದ್ಭುತಗಳಲ್ಲಿ ತಾಜ್ ಮಹಲ್ ಕೂಡಾ ಸ್ಥಾನ ಪಡೆದಿದೆ. ಆದರೆ ಕಳೆದ ಐದು ವರ್ಷಗಳಲ್ಲಿ ತಾಜ್ ಮಹಲ್ ಅತಿ ಹೆಚ್ಚು ಆದಾಯ ಗಳಿಸಿದ ಸ್ಮಾರಕವಾಗಿದೆ’ ಎಂದಿದ್ದಾರೆ.
* ಇವುಗಳೊಂದಿಗೆ ತಮಿಳುನಾಡಿನ ಮಮ್ಮಲಪುರಂ, ಕೊನಾರ್ಕ್‌ನ ಸೂರ್ಯ ದೇವಾಲಯಗಳಿಗೂ ಪ್ರವಾಸಿಗರು ಭೇಟಿ ನೀಡಿದ್ದು ಹೆಚ್ಚು ಎಂದಿದ್ದಾರೆ.
* ಹಣಕಾಸು ವರ್ಷ 2020-2021 ರಲ್ಲಿ ತಮಿಳುನಾಡಿನ ಮಾಮಲ್ಲಪುರಂನ ಸ್ಮಾರಕಗಳ ಗುಂಪು ಮತ್ತು ಕೊನಾರ್ಕ್‌ನ ಸೂರ್ಯ ದೇವಾಲಯ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿದ್ದವು.
* ಸ್ಮಾರಕಗಳ ಆದಾಯ (₹ಕೋಟಿಗಳಲ್ಲಿ)
- 2020–2024 ; ತಾಜ್‌ಮಹಲ್ ; ₹297
- 2023–24; ದೆಹಲಿಯ ಕುತುಬ್‌ಮಿನಾರ್ ; ₹23.80
- 2023–24 ; ದೆಹಲಿಯ ಕೆಂಪುಕೋಟೆ ; ₹18.08
ಸೋಮವಾರ, 07 ಎಪ್ರಿಲ್ 2025
11:44 ಪೂರ್ವಾಹ್ನ
Daily PDF
ತಾಜ್ಮಹಲ್ನಿಂದ ASIಗೆ ಅತಿ ಹೆಚ್ಚು ಆದಾಯ
Authored by:
Bhagya R K