➤ ರಕ್ಷಣಾ ವಲಯದಲ್ಲಿ ಸಹಕಾರ (Defence Cooperation):
- ರಫ್ತುದಾರನಿಂದ ಉತ್ಪಾದಕನತ್ತ transformation: 1970ರಿಂದಲೂ ಭಾರತ ಮತ್ತು ಸ್ವೀಡನ್ ನಡುವೆ ರಕ್ಷಣಾ ಸಹಕಾರವಿದೆ. ಆದರೆ ಈಗ ಕೇವಲ ಆಮದು ಮಾಡಿಕೊಳ್ಳುವುದಕ್ಕೆ ಸೀಮಿತವಾಗದೆ, 100% ಸ್ವೀಡಿಷ್ ಮಾಲೀಕತ್ವದ ರಕ್ಷಣಾ ಉತ್ಪಾದನಾ ಘಟಕಗಳನ್ನು ಭಾರತದಲ್ಲಿಯೇ ಸ್ಥಾಪಿಸಲಾಗುತ್ತಿದೆ (ಉದಾಹರಣೆಗೆ: ಸಾಬ್/Saab ಕಂಪನಿಯ ಕಾರ್ಲ್-ಗುಸ್ತಾವ್/Carl-Gustaf ಕ್ಷಿಪಣಿ ಉತ್ಪಾದನಾ ಘಟಕ).
- ಪ್ರಧಾನಿ ಮೋದಿಯವರ ಪರಿಕಲ್ಪನೆ: “ಸ್ವೀಡನ್‌ನಲ್ಲಿ ನಾವೀನ್ಯತೆ (Innovate in Sweden), ಭಾರತದಲ್ಲಿ ಉತ್ಪಾದನೆ (Manufacture with India), ಜಗತ್ತಿಗೆ ಸೇವೆ (Serve the World)” ಎಂಬ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಸ್ವೀಡನ್ ಸಂಪೂರ್ಣ ಬೆಂಬಲ ಸೂಚಿಸಿದೆ.
➤ ಆರ್ಥಿಕ ಮತ್ತು ದ್ವಿಪಕ್ಷೀಯ ಸಂಬಂಧಗಳು (Economic Ties):
- ಭಾರತದಲ್ಲಿ 300ಕ್ಕೂ ಹೆಚ್ಚು ಸ್ವೀಡಿಷ್ ಕಂಪನಿಗಳು ಕಾರ್ಯಾಚರಣೆ ನಡೆಸುತ್ತಿದ್ದು, 100ಕ್ಕೂ ಹೆಚ್ಚು ಕಂಪನಿಗಳು ಉತ್ಪಾದನಾ ಘಟಕಗಳನ್ನು ಸ್ಥಾಪಿಸಿವೆ.
- ಜಾಗತಿಕ ಪೂರೈಕೆ ಸರಪಳಿಯಲ್ಲಿ (Global Supply Chain) ಭಾರತ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದ್ದು, ಸ್ವೀಡನ್-ಭಾರತ ಸಹಕಾರ ನಿಯಮ-ಆಧಾರಿತ ಜಾಗತಿಕ ವ್ಯವಸ್ಥೆಗೆ (Rules-based world order) ಬಲ ತಂದಿದೆ.