* ಕರ್ನಾಟಕ ಪರಿಸರ ಸಚಿವ ಈಶ್ವರ್ ಖಂಡ್ರೆ ಬುಧವಾರ(ಫೆ.05) ಮಾನವ-ಆನೆ ಸಂಘರ್ಷ ತಗ್ಗಿಸಲು ಅಭಿವೃದ್ಧಿಪಡಿಸಿದ ಜಿಎಸ್ಎಂ ಆಧಾರಿತ ಆನೆ ರೇಡಿಯೋ ಕಾಲರ್-ಕೆಪಿ ಟ್ರ್ಯಾಕರ್ ಅನ್ನು ಬಿಡುಗಡೆ ಮಾಡಿದರು.
* ಈ ಸಾಧನವನ್ನು ಅರಣ್ಯ ಇಲಾಖೆ ಇನ್ಫಿಕ್ಷನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ.
* ಹೊಸದಾಗಿ ಪ್ರಾರಂಭಿಸಿದ ಕರ್ನಾಟಕ ಉತ್ಪಾದಿತ ವೆಚ್ಚ-ಪರಿಣಾಮಕಾರಿ ರೇಡಿಯೋ ಕಾಲರ್‌ಗಳು ತ್ವರಿತ ನಿಯೋಜನೆಗೆ ಲಭ್ಯವಾಗಿವೆ. ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದುದರಿಂದ ಅವು ಕಡಿಮೆ ಪರಿಸರ ಪರಿಣಾಮವನ್ನು ಹೊಂದಿವೆ.
* ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಆನೆಗಳ ಹಾವಳಿಯನ್ನು ತಡೆಯಲು, ಆನೆಗಳ ಹಿಂಡನ್ನು ಮುನ್ನಡೆಸುವ ಹೆಣ್ಣು ಆನೆಗಳಿಗೆ ಸ್ಥಳೀಯವಾಗಿ ತಯಾರಿಸಿದ ರೇಡಿಯೋ ಕಾಲರ್‌ಗಳನ್ನು ಅಳವಡಿಸಿ ಅವುಗಳ ಚಲನವಲನಗಳನ್ನು ತಕ್ಷಣವೇ ಸ್ಥಳೀಯರಿಗೆ ತಿಳಿಸುವ ಉಪಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.
* ಕರ್ನಾಟಕದಲ್ಲಿ 6,395 ಆನೆಗಳಿವೆ, ಕರ್ನಾಟಕವು ದೇಶದಲ್ಲಿ ಅತಿ ಹೆಚ್ಚು ಆನೆಗಳ ಸಂಖ್ಯೆಯನ್ನು ಹೊಂದಿದೆ ಆದರೆ ಅರಣ್ಯ ವಿಸ್ತರಣೆ ಕಡಿಮೆಯಾಗಿರುವುದರಿಂದ ಮಾನವ-ಆನೆ ಸಂಘರ್ಷ ಹೆಚ್ಚಾಗಿದೆ.
* ಈ ಸಮಸ್ಯೆ ನಿರ್ವಹಿಸಲು ಬಂಡೀಪುರ ಮತ್ತು ನಾಗರಹೊಳೆ ಹುಲಿ ಮೀಸಲು ಪ್ರದೇಶಗಳ ಅಧಿಕಾರಿಗಳಿಗೆ ರೇಡಿಯೋ ಕಾಲರ್‌ಗಳನ್ನು ಹಸ್ತಾಂತರಿಸಲಾಗಿದೆ.
* ಒಂದೊಮ್ಮೆ ನಾಡಿಗೆ ಪ್ರವೇಶಿಸಿದರೆ, ಬೆಳೆಗಳ ಹತ್ತಿರ ಬಂದರೆ ಸಾರ್ವಜನಿಕರಿಗೆ ಮುನ್ಸೂಚನೆ ನೀಡಲಾಗುವುದು ಆ ಮೂಲಕ ಆಗಬಹುದಾದ ಅನಾಹುತ ತಪ್ಪಿಸಲಾಗುವುದು.
* ದಕ್ಷಿಣ ಅಫ್ರಿಕಾ ಹಾಗೂ ಜರ್ಮನಿಯಿಂದ ಆಮದು ಮಾಡಿಕೊಳ್ಳುತ್ತಿದ್ದ ಆನೆ ರೇಡಿಯೋ ಕಾಲರ್​ಗಳಿಗೆ ಹೋಲಿಸಿದರೆ ಸ್ಥಳೀಯ ಆನೆ ಕಾಲರ್​ಗಳು ಗುಣಮಟ್ಟದಿಂದ ಕೂಡಿದ್ದು, ಕೈಗೆಟುವ ದರವಿದೆ. 1.80 ಲಕ್ಷ ರೂ. ದರದಲ್ಲಿ ಒಂದು ಆನೆ ಕಾಲರ್ ತಯಾರಾದರೆ ವಿದೇಶಿ ಆನೆ ಕಾಲರ್ 6.50 ಲಕ್ಷ ರೂ. ತಗುಲುತ್ತಿತ್ತು.
* ಸ್ಥಳೀಯ ಆನೆ ಕಾಲರ್ ಬ್ಯಾಟರಿ ದೀರ್ಘಕಾಲದವರೆಗೆ ಬಾಳಿಕೆ ಬರಲಿದೆ. ಆಮದು ರೇಡಿಯೋ ಕಾಲರ್​ಗಳ ತೂಕ 16 ರಿಂದ 17 ಕೆ.ಜಿ ಇದ್ದರೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕಾಲರ್ ಕೇವಲ 7 ಕೆ.ಜಿ. ತೂಕವಿದ್ದು, ಇದು ಹಗುರವಾಗಿದೆ.