* ಕೇಂದ್ರ ಸರ್ಕಾರದ 2023ನೇ ಸಾಲಿನ ಸ್ವಚ್ಛತಾ ಸರ್ವೇಕ್ಷಣೆಯ ಫಲಿತಾಂಶ ಪ್ರಕಟವಾಗಿದ್ದು, ದೇಶದ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಮಧ್ಯಪ್ರದೇಶದ ಇಂದೋರ್ ನಗರ ಸತತ ಏಳನೇ ಬಾರಿಗೆ ಪಾತ್ರವಾಗಿದೆ.
* ಸುಸ್ಥಿರ ಮತ್ತು ಸ್ಥಿರ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯು ಇಂದೋರ್ ಅಗ್ರಸ್ಥಾನಕ್ಕೇರುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಇಂದೋರ್ ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
* ಗುಜರಾತ್‌ನ ಸೂರತ್ ಮತ್ತು ಮಹಾರಾಷ್ಟ್ರದ ನವಿ ಮುಂಬೈ ನಗರಗಳು ನಂತರದ ಸ್ಥಾನದಲ್ಲಿವೆ. ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿಯಲ್ಲಿ ಉತ್ತಮ ಪ್ರದರ್ಶನ ತೋರಿದ ರಾಜ್ಯಗಳ ವಿಭಾಗದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಮಧ್ಯಪ್ರದೇಶ ಮತ್ತು ಛತ್ತೀಸಗಢ ರಾಜ್ಯಗಳು ಇವೆ.
* ಉತ್ತರ ಪ್ರದೇಶದ ಒಟ್ಟು ಆರು ನಗರಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಮಾಹಿತಿ ನೀಡಿದೆ.
* 2023 ರ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿಗಳ 'ಗಂಗಾ ಸಿಟಿ' ವಿಭಾಗದಲ್ಲಿ ಉತ್ತರ ಪ್ರದೇಶದ ವಾರಣಾಸಿ ಮತ್ತು ಪ್ರಯಾಗ್‌ರಾಜ್ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನವನ್ನು ಪಡೆದಿವೆ.
* ಜಗತ್ತಿನ ಅತ್ಯಂತ ಪ್ರಬಲ ಪಾಸ್‌ಪೋರ್ಟ್: ಫ್ರಾನ್ಸ್, ಜರ್ಮನಿ, ಇಟಲಿ ಸಹಿತ 6 ದೇಶಗಳಿಗೆ ಅಗ್ರ ಸ್ಥಾನದಲ್ಲಿವೆ, ಅದರಲ್ಲಿ ಭಾರತ 80ನೇ ಸ್ಥಾನದಲ್ಲಿದೆ.
ಶುಕ್ರವಾರ, 12 ಜನವರಿ 2024
5:13 ಅಪರಾಹ್ನ
Daily PDF
ಸ್ವಚ್ಛತಾ ಸರ್ವೇಕ್ಷಣೆ 2023 : ಮಹಾರಾಷ್ಟ್ರ ಸ್ವಚ್ಛ ರಾಜ್ಯ, ಇಂದೋರ್ ಸ್ವಚ್ಛ ನಗರ
Authored by:
Bhagya R K