* ಲಾಪತಾ ಲೇಡೀಸ್’ ಚಿತ್ರದ ನಂತರ ಇದೀಗ ಬಾಲಿವುಡ್ ನಟ ರಣದೀಪ್ ಹೂಡಾ ನಟಿಸಿ, ನಿರ್ದೇಶಿಸಿರುವ ‘ಸಾವರ್ಕರ್’ ಚಿತ್ರ 2025ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ.
* ಹಿಂದುತ್ತವಾದಿ ಸಾವರ್ಕರ್ ಜೀವನಗಾಥೆಯನ್ನು ಹೊಂದಿದ ಈ ಸಿನಿಮಾದಲ್ಲಿ ರಣ್ ದೀಪ್ ಹೂಡಾ ಜೊತೆ ಬಾಲಿವುಡ್ ನಟಿ ಅಂಕಿತಾ ಲೋಖಂಡೆ ನಟಿಸಿದ್ದರು.
* ಮಾರ್ಚ 2024ರಲ್ಲಿ ಹಿಂದಿ ಹಾಗೂ ಮಾರಾಠಿಯಲ್ಲಿ ತೆರೆಕಂಡಿತ್ತು. ನಟ ರಣ್ ದೀಪ್ ಹೂಡಾ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಟಿ ಅಂಕಿತಾ ಲೋಖಂಡೆ ಮತ್ತು ಅಮಿತ್ ಸಿಯಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
* ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿರುವ ಚಿತ್ರತಂಡ ಪೋಸ್ಟರ್ ವೊಂದನ್ನು ಹಂಚಿಕೊಂಡಿದೆ.
* ‘ನಮ್ಮ ಸಿನಿಮಾ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. ಚಿತ್ರವನ್ನು ಗುರುತಿಸಿ ಆಯ್ಕೆ ಮಾಡಿದ್ದಕ್ಕಾಗಿ ಭಾರತೀಯ ಚಲನಚಿತ್ರ ಫೆಡರೇಷನ್ ಗೆ ಧನ್ಯವಾದಗಳು. ಇದೊಂದು ಅಧ್ಬುತ ಪ್ರಯಾಣವಾಗಿದ್ದು, ಈ ಪ್ರಯಾಣದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ತಿಳಿಸಿದೆ.
ಬುಧವಾರ, 25 ಸೆಪ್ಟೆಂಬರ್ 2024
10:44 ಪೂರ್ವಾಹ್ನ
Daily PDF
‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ ಆಸ್ಕರ್ ಗೆ ಪ್ರವೇಶ
Authored by:
Jyoti Angadi