➤ ಫೈನಲ್ ಪಂದ್ಯದಲ್ಲಿ ಹಂಗೇರಿಯ ಬೆನೆಡೆಕ್ ಟಾಕಾಕ್ಸ್ ವಿರುದ್ಧ ಅತ್ಯಂತ ರೋಚಕವಾಗಿ ಕಾದಾಡಿದ ಸೂರಜ್, 5 ಸೆಟ್‌ಗಳ ಕಠಿಣ ಹೋರಾಟದ ನಂತರ 3-2 ಅಂತರದಲ್ಲಿ ಗೆದ್ದು ಸ್ವರ್ಣ ಪದಕಕ್ಕೆ ಮುತ್ತಿಟ್ಟರು.
➤ ಸೂರಜ್ ಕುಮಾರ್ ಚಂದ್: 25 ವರ್ಷ ಪ್ರಾಯದ ಸೂರಜ್ ಕುಮಾರ್, ಮಹಾರಾಷ್ಟ್ರದ ಮುಂಬೈನವರು. ಪ್ರಸ್ತುತ ಮುಂಬೈನ ಸೋಮಯ್ಯ ವಿದ್ಯಾವಿಹಾರ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ (ವಿಶೇಷವೆಂದರೆ, ಇದೇ ವಿಶ್ವವಿದ್ಯಾಲಯದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪಂದ್ಯಾವಳಿ ನಡೆದಿತ್ತು). ಸೂರಜ್ ಕುಮಾರ್ ಅವರ ಪ್ರಮುಖ ಸಾಧನೆಗಳು:
- ಶಾಲಾ ರಾಷ್ಟ್ರೀಯ ಕ್ರೀಡಾಕೂಟ: ನ್ಯಾಷನಲ್ ಸ್ಕೂಲ್ ಗೇಮ್ಸ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ.
- ಜೋಹಾನ್ಸ್‌ಬರ್ಗ್ 2024: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ 2024ರ ವಿಶ್ವ ವಿಶ್ವವಿದ್ಯಾಲಯ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ಹಾಗೂ ತಂಡ ವಿಭಾಗದಲ್ಲಿ ಕಂಚಿನ ಪದಕ.
- ಎಚ್‌ಸಿಎಲ್ ಪಿಎಸ್‌ಎ ಇಂಡಿಯನ್ ಟೂರ್ (HCL PSA Indian Tour 2026): ಏಪ್ರಿಲ್ 2026 ರಲ್ಲಿ ಚೆನ್ನೈನಲ್ಲಿ ನಡೆದ ಎಚ್‌ಸಿಎಲ್ ಪಿಎಸ್‌ಎ ಟೂರ್‌ನಲ್ಲಿ ಒಂದೇ ಒಂದು ಗೇಮ್ ಸೋಲದೆ ಪ್ರಶಸ್ತಿ ಗೆಲುವು.
- ಏಷ್ಯನ್ ಗೇಮ್ಸ್ ಆಯ್ಕೆ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ಗಾಗಿ ಭಾರತೀಯ ಪುರುಷರ ತಂಡ ಮತ್ತು ಮಿಕ್ಸೆಡ್ ಡಬಲ್ಸ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.