- ಅನುಮೋದನೆ ನೀಡಿದ ಸಂಸ್ಥೆ: ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರಗಳ ಪ್ರಾಧಿಕಾರ (IFSCA).
- ಆಯ್ಕೆಯಾದ ಬ್ಯಾಂಕ್: ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ (Standard Chartered - ವಿದೇಶಿ ಬ್ಯಾಂಕ್).
- ಸೇವೆಯ ಸ್ವರೂಪ: ಬಂಡವಾಳ ಮಾರುಕಟ್ಟೆ ಉತ್ಪನ್ನಗಳು, ಹೂಡಿಕೆ ಸಲಹೆ (Investment Advisory) ಹಾಗೂ ಚಿಲ್ಲರೆ ಸಂಪತ್ತು ನಿರ್ವಹಣೆ (Retail Wealth Management) ಸೇವೆಗಳು.
- ಪ್ರಾರಂಭಿಕ ಯೋಜನೆ: ಬ್ಯಾಂಕ್ ತನ್ನ ‘ಸಿಗ್ನೇಚರ್ ಸಿಐಒ ಫಂಡ್ಸ್’ (Signature CIO Funds) ಅನ್ನು ಗಿಫ್ಟ್ ಸಿಟಿಯಿಂದ ಬಿಡುಗಡೆ ಮಾಡಲಿದ್ದು, ಮುಂಬರುವ ದಿನಗಳಲ್ಲಿ ಇತರ ರಿಟೇಲ್ ಉತ್ಪನ್ನಗಳನ್ನು ಪರಿಚಯಿಸಲಿದೆ.
➤ ಗಿಫ್ಟ್ ಸಿಟಿಯಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಹಿನ್ನೆಲೆ:
- ಮೊದಲ ವಿದೇಶಿ ಬ್ಯಾಂಕ್: 2020 ರಲ್ಲಿ ಗಿಫ್ಟ್ ಸಿಟಿಯಲ್ಲಿ (GIFT City IFSC) ಕಾರ್ಯಾಚರಣೆ ಪ್ರಾರಂಭಿಸಿದ ಮೊದಲ ವಿದೇಶಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಸ್ಟ್ಯಾಂಡರ್ಡ್ ಚಾರ್ಟರ್ಡ್ ಪಾತ್ರವಾಗಿತ್ತು.
- ಸೇವಾ ವಿಸ್ತರಣೆ: ಪ್ರಸ್ತುತ ಬ್ಯಾಂಕ್ ಇಲ್ಲಿಂದ 600ಕ್ಕೂ ಹೆಚ್ಚು ಸಾಂಸ್ಥಿಕ ಮತ್ತು ಕಾರ್ಪೊರೇಟ್ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದ್ದು, ಈಗ ರಿಟೇಲ್ ವೆಲ್ತ್ ಮ್ಯಾನೇಜ್‌ಮೆಂಟ್ ವಲಯಕ್ಕೂ ಕಾಲಿಡುತ್ತಿದೆ.