* 1993 ರ ಬ್ಯಾಚ್‌ನ ಉತ್ತರ ಪ್ರದೇಶ ಕೇಡರ್ ಭಾರತೀಯ ಪೊಲೀಸ್ (ಐಪಿಎಸ್) ಅಧಿಕಾರಿ ಸಂಜಯ್ ಸಿಂಘಾಲ್ ಅವರನ್ನು ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ)ಯ ಹೊಸ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.
* ಆಗಸ್ಟ್ 31, 2025 ರಂದು ನಿವೃತ್ತರಾಗಲಿರುವ ಅಮೃತ್ ಮೋಹನ್ ಪ್ರಸಾದ್ ಅವರ ನಂತರ ಅವರು ನೇಮಕಗೊಳ್ಳಲಿದ್ದಾರೆ.
* ಪ್ರಸ್ತುತ ಬಿಎಸ್‌ಎಫ್‌ನ ವಿಶೇಷ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಸಿಂಘಾಲ್ ಅವರು ಸೆಪ್ಟೆಂಬರ್ 1, 2025 ರಿಂದ ಎಸ್‌ಎಸ್‌ಬಿಯ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
* ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಸಿಂಘಾಲ್ ಅವರ ಅಧಿಕಾರಾವಧಿಯು ಡಿಸೆಂಬರ್ 31, 2028 ರಂದು ನಿವೃತ್ತರಾಗುವವರೆಗೆ ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಮುಂದುವರಿಯುತ್ತದೆ.
ಸಶಸ್ತ್ರ ಸೀಮಾ ಬಲದ ಹೊಸ ಮಹಾನಿರ್ದೇಶಕರಾಗಿ ಸಂಜಯ್ ಸಿಂಘಾಲ್ ನೇಮಕ
Published by Bhagya R K
29 ಜುಲೈ 2025