* 'ಸಂತ ಸೇವಾಲಾಲ್ ಪ್ರಶಸ್ತಿ' ಸ್ಥಾಪಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಈ ಪ್ರಶಸ್ತಿಯು ₹1 ಲಕ್ಷ ನಗದು ಒಳಗೊಂಡಿದೆ.
* ಈ ಪ್ರಶಸ್ತಿ ಬಂಜಾರಾ ಸಮುದಾಯದ ಹಿರಿಯ ಸಾಧಕರಿಗೆ ಅವರ ವಿಶೇಷ ಸಾಧನೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
* ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಎ. ಆರ್. ಗೋವಿಂದ ಸ್ವಾಮಿ ಅವರು ಈ ಪ್ರಶಸ್ತಿ ಸ್ಥಾಪನೆಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದರು.
* ಸಂತ ಸೇವಾಲಾಲ್ ಅವರು ಒಬ್ಬ ಭಾರತೀಯ ಸಾಮಾಜಿಕ-ಧಾರ್ಮಿಕ ಸುಧಾರಕ ಮತ್ತು ಸಮುದಾಯ ನಾಯಕ. ಇವರನ್ನು ಗೋರ್ ಬಂಜಾರ ಸಮುದಾಯದವರಿಂದ ಆಧ್ಯಾತ್ಮಿಕ ಗುರು ಎಂದು ಗೌರವಿಸಲಾಗುತ್ತದೆ.
* 15 ಫೆಬ್ರುವರಿ 1739 ರಂದು,ಭೀಮ ನಾಯ್ಕ ಹಾಗೂ ಧರ್ಮಣಿ ಬಾಯಿ ದಂಪತಿಗಳಿಗೆ, ಬಂಜಾರ ಸಮುದಾಯದಲ್ಲಿ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗುತ್ತಿ ತಾಲ್ಲೂಕಿನ, ಸೇವಾಗಡ ಎಂಬ ಗ್ರಾಮದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ.
'ಸಂತ ಸೇವಾಲಾಲ್ ಪ್ರಶಸ್ತಿ' ಸ್ಥಾಪಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
Published by Jyoti Angadi
10 ಜನವರಿ 2025