* ತೆಲಂಗಾಣ ಸರ್ಕಾರವು ಯಂಗ್ ಇಂಡಿಯಾ ಸ್ಕಿಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರನ್ನು ನೇಮಿಸಲಾಗಿದೆ. ಈ ಸ್ಥಾನದಲ್ಲಿ ಆನಂದ್ ಮಹೀಂದ್ರಾ ಅವರು ಒಂದು ವರ್ಷ ಸೇವೆ ಸಲ್ಲಿಸಲಿದ್ದು, ಅವರ ನೇಮಕಾತಿ ಬಗ್ಗೆ ಸರ್ಕಾರ ಆಗಸ್ಟ್ 15 ರಂದು ಅಧಿಕೃತ ಆದೇಶ ಹೊರಡಿಸಿದೆ.
* ರಾಜ್ಯದಲ್ಲಿ ಕೌಶಲ ಅಭಿವೃದ್ದಿಗಾಗಿ ಹಾಗೂ ವೃತ್ತಿ ಪರ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಉಪಕ್ರಮದ ಭಾಗವಾಗಿ, ಖುದ್ದು ಮುಖ್ಯಮಂತ್ರಿ ರೇವಂತ್ ಅವರೇ ಆನಂದ್ ಮಹೀಂದ್ರಾ ಅವರನ್ನು ಈ ಸ್ಥಾನಕ್ಕೆ ಆಹ್ವಾನಿಸಿದ್ದರು.
* ಆನಂದ್ ಮಹೀಂದ್ರಾ ಅವರು ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದು, ಈ ಬಗ್ಗೆ ಸಿಎಂ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಘೋಷಣೆ ಮಾಡಿದ್ದರು.
ಶನಿವಾರ, 17 ಆಗಸ್ಟ್ 2024
11:48 ಪೂರ್ವಾಹ್ನ
Daily PDF
ಸ್ಕಿಲ್ಸ್ ವಿಶ್ವ ವಿದ್ಯಾಲಯದ ಮುಖ್ಯಸ್ಥರಾಗಿ ಆನಂದ ಮಹಿಂದ್ರಾ ನೇಮಕ
Authored by:
Jyoti Angadi