* ರಸಾಯನ ವಿಜ್ಞಾನದ ಬೋಧ್ಯ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ ಹಿನ್ನೆಲೆಯಲ್ಲಿ ಗೋಕರ್ಣ ಮೂಲದ ನಾರಾಯಣ ಸದಾಶಿವ ಹೊಸಮನೆ ಅವರನ್ನು ಸ್ಕಾಲರ್ ಜಿಪಿಎಸ್ ಸಂಸ್ಥೆ ಉನ್ನತ ವಿದ್ವಾಂಸರೆಂದು ಗುರುತಿಸಿದೆ.
* 2024ರ ಸ್ಕಾಲರ್ ಜಿಪಿಎಸ್ ರ್ಯಾಂಕಿಂಗ್ ಪ್ರಕಟಿಸಲಾಗಿದ್ದು, ನಾರಾಯಣ ಅವರ ಸಾಧನೆಗಳ ಆಧಾರದಲ್ಲಿ ಅವರಿಗೆ ಈ ಗೌರವ ಲಭಿಸಿದೆ ಎಂದು ಸಂಸ್ಥೆ ತಿಳಿಸಿದೆ.
* ಅವರು ಪದವಿ ಶಿಕ್ಷಣವನ್ನು ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನಲ್ಲಿ ಹಾಗೂ ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ.
* ಎಡಿನ್‌ಬರ್ಗ್‌ನಲ್ಲಿ ಪಿಎಚ್‌ಡಿ ಮಾಡಿದ ಅವರು, ವಿವಿಧ ರಾಷ್ಟ್ರಗಳ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಅಧ್ಯಯನ ಹಾಗೂ ಸಂಶೋಧನೆ ನಡೆಸಿದ್ದಾರೆ.
* ಅವರು ಅಮೆರಿಕದ ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಡೆಕಾಲ್‌ನ ಲೊಮಾ ಲಿಂಡಾ ವೈದ್ಯಕೀಯ ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
* ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೇರಿದಂತೆ 14 ವಿಶಾಲ ಕ್ಷೇತ್ರಗಳ 177 ವಿಷಯಗಳು ಹಾಗೂ 3.5 ಲಕ್ಷಕ್ಕೂ ಹೆಚ್ಚು ವಿಶೇಷತೆಗಳನ್ನು ಆಧಾರವಾಗಿಸಿಕೊಂಡು ಸ್ಕಾಲರ್ ಜಿಪಿಎಸ್ ಉನ್ನತ ವಿದ್ವಾಂಸರ ಪಟ್ಟಿ ಪ್ರಕಟಿಸುತ್ತದೆ.
* 2023ರಲ್ಲಿ ಸ್ಥಾಪಿತವಾದ ಸ್ಕಾಲರ್ ಜಿಪಿಎಸ್ ಒಂದು ವಿದ್ವಪೂರ್ಣ ವಿಶ್ಲೇಷಣಾ ವೇದಿಕೆಯಾಗಿದ್ದು, ಇದರ ಪ್ರಧಾನ ಕಚೇರಿ ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್‌ನಲ್ಲಿ ಇದೆ. ಸಂಶೋಧನೆಯನ್ನು ಉತ್ತೇಜಿಸುವುದು ಮತ್ತು ತಜ್ಞರನ್ನು ಗುರುತಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.
ಸ್ಕಾಲರ್ ಜಿಪಿಎಸ್ ಗೌರವ ಪಡೆದ ರಸಾಯನ ವಿಜ್ಞಾನಿ ನಾರಾಯಣ ಹೊಸಮನೆ
Published by Jyoti Angadi
27 ಮೇ 2025