* ಸಿಖ್ ಸಮುದಾಯದ ಪ್ರತಿನಿಧಿಗಳು ಪವಿತ್ರ ಅವಶೇಷ ‘ಜೋರೆ ಸಾಹಿಬ್’ ಸಂರಕ್ಷಣೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
* ಪ್ರಧಾನಿ ಅವರು, ಇದು ಸಿಖ್ ಇತಿಹಾಸದೊಂದಿಗೆ ದೇಶದ ಸಾಂಸ್ಕೃತಿಕ ಪರಂಪರೆಯ ಭಾಗವೂ ಆಗಿದೆ ಎಂದು ಹೇಳಿದರು.
* ‘ಜೋರೆ ಸಾಹಿಬ್’ ಎಂದರೆ ಗುರು ಗೋವಿಂದ್ ಸಿಂಗ್ ಹಾಗೂ ಅವರ ಪತ್ನಿ ಮಾತಾ ಸಾಹೀಬ್ ಕೌರ್ ಧರಿಸಿದ್ದ ಪಾದರಕ್ಷೆಗಳು. ಸಿಖ್ ಭಕ್ತರ ಪಾಲಿಗೆ ಇವು ನೇರ ದೈವೀ ಸಂಬಂಧ ಹೊಂದಿರುವ ಪವಿತ್ರ ಅವಶೇಷಗಳೆಂದು ನಂಬಿಕೆ.
* ಪಂಜಾಬಿಯಲ್ಲಿ ‘ಜೋಡಾ’ ಎಂದರೆ ಚಪ್ಪಲಿ. ಇಂತಹ ಗುರುಗಳ ವೈಯಕ್ತಿಕ ವಸ್ತುಗಳು ಭಕ್ತರಲ್ಲಿ ಅಪಾರ ಭಾವನೆ ಉಂಟುಮಾಡುತ್ತವೆ.
* ಅವುಗಳನ್ನು ವಿಭಿನ್ನ ಸ್ಥಳಗಳಲ್ಲಿ ದರ್ಶನಕ್ಕೆ ಇಡಲಾಗುತ್ತದೆ. ಗುರು ಗೋವಿಂದ್ ಸಿಂಗ್ ಖಾಲ್ಸಾ ಪಂಥ ಸ್ಥಾಪಿಸಿ ‘ಐದು ಕೆ’ಗಳ ಮೂಲಕ ಶಿಸ್ತನ್ನು ಬೋಧಿಸಿದ್ದರು.
* ಈ ಪಾದರಕ್ಷೆಗಳು ದಿಲ್ಲಿಯ ಕರೋಲ್ ಬಾಗ್‌ನ ಪುರಿ ಕುಟುಂಬದ ಮನೆಯಲ್ಲಿ ಮೂರು ಶತಮಾನಗಳಿಂದ ಸಂರಕ್ಷಿತವಾಗಿವೆ. ಈಗ ಸರಕಾರ ಮತ್ತು ಸಿಖ್ ಸಮುದಾಯ ಒಟ್ಟಾಗಿ ಅವುಗಳ ಶ್ರೇಷ್ಠ ಸಂರಕ್ಷಣೆ ಮತ್ತು ಗೌರವಯುತ ಪ್ರದರ್ಶನದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
ಸಿಖ್ ಅವಶೇಷ ‘ಜೋರೆ ಸಾಹಿಬ್’ ಸಂರಕ್ಷಣೆಗೆ ಮನವಿ
Published by Jyoti Angadi
23 ಸೆಪ್ಟೆಂಬರ್ 2025