* ಅರ್ನ್ಸ್ಟ್ ಆ್ಯಂಡ್ ಯಂಗ್ (ಇವೈ) ಇಂಡಿಯಾ ಸಂಸ್ಥೆಯ ಅಧ್ಯಕ್ಷ ರಾಜೀವ್ ಮೆಮಾನಿ ಅವರು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) 2025–26ನೆಯ ಅವಧಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
* ಹೊಸದಾಗಿ ರಚಿಸಲಾದ ಸಿಐಐ ರಾಷ್ಟ್ರೀಯ ಮಂಡಳಿಯ ಮೊದಲ ಸಭೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಭಾರತದ ವ್ಯವಹಾರ ಮತ್ತು ನೀತಿ ವಲಯಗಳಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಮೆಮಾನಿ ಇವೈ ಗ್ಲೋಬಲ್ ಎಕ್ಸಿಕ್ಯೂಟಿವ್ ಬೋರ್ಡ್‌ಲ್ಲಿ ಗೋತ್ ಮಾರ್ಕೆಟ್ಸ್ ಕೌನ್ಸಿಲ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
* ಚಾರ್ಟರ್ಡ್ ಅಕೌಂಟೆಂಟ್ ಮತ್ತು ಎಸ್‌ಆರ್‌ಸಿಸಿ ಪದವೀಧರರಾಗಿರುವ ಮೆಮಾನಿ ಇವೈ ಭಾರತದ ಕಾರ್ಯತಂತ್ರ ಮತ್ತು ವಹಿವಾಟು ಅಭ್ಯಾಸವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
* ಬೆಳವಣಿಗೆ, ಬಂಡವಾಳ ತಂತ್ರ ಕುರಿತು ಉನ್ನತ ಭಾರತೀಯ ಮತ್ತು ಜಾಗತಿಕ ಕಾರ್ಪೋರೇಟ್ಗಳಿಗೆ ಸಲಹೆ ನೀಡುವಲ್ಲಿ ಅವರು ಹೆಸರುವಾಸಿಯಾಗಿದ್ದಾರೆ. ಅಲ್ಲದೆ, 2019ರ ನೇರ ತೆರಿಗೆ ಸಂಹಿತೆಯ ಕುರಿತು ಹಣಕಾಸು ಸಚಿವಾಲಯದ ಕಾರ್ಯಪಡೆ ಸೇರಿದಂತೆ ಹಲವಾರು ಉನ್ನತ ಶಕ್ತಿಯ ಸರಕಾರಿ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸಿಐಐ ಅಧ್ಯಕ್ಷರಾಗಿ ರಾಜೀವ್ ಮೆಮಾನಿ ನೇಮಕ
Published by Jyoti Angadi
02 ಜೂನ್ 2025