* ಶ್ರೀಲಂಕಾದ ಮಾಜಿ ದೇಶೀಯ ಕ್ರಿಕೆಟಿಗ ಸಾಲಿಯಾ ಸಮನ್ ಅವರನ್ನು ಐಸಿಸಿ ಭ್ರಷ್ಟಾಚಾರ ವಿರೋಧಿ ನ್ಯಾಯಮಂಡಳಿಯು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಐದು ವರ್ಷಗಳ ಕಾಲ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ.
* 2021ರ ಅಬುಧಾಬಿ ಟಿ-10 ಪಂದ್ಯಾವಳಿ ವೇಳೆ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗವಹಿಸುವಂತೆ ತಂಡದ ಆಟಗಾರರಿಗೆ ಹಣ ಮತ್ತು ಬಹುಮಾನಗಳನ್ನು ಹಂಚಿಕೆ ಮಾಡಿದ್ದರು ಎಂದು ಎಂಟು ಆಟಗಾರರ ವಿರುದ್ಧ ಆರೋಪ ಕೇಳಿ ಬಂದಿತ್ತು. ಇದರಲ್ಲಿ 39 ವರ್ಷದ ಸಲಿಯಾ ಸಮನ್ ಕೂಡ ಒಬ್ಬರಾಗಿದ್ದಾರೆ.
* ಆಗಸ್ಟ್ 15 ಶುಕ್ರವಾರದಂದು ಐಸಿಸಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ನಿಷೇಧವು ಸೆಪ್ಟೆಂಬರ್ 13, 2023 ರಿಂದ ಜಾರಿಗೆ ಬರಲಿದೆ. 2023ರಲ್ಲಿ ಸಲಿಯಾ ಸಮನ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು.
* ಇದೀಗ ಪೂರ್ಣ ವಿಚಾರಣೆಯ ನಂತರ ಆರ್ಟಿಕಲ್ 2.1.1ರ ಅಡಿ ತಪ್ಪಿತಸ್ಥರೆಂದು ಘೋಷಿಸಲಾಗಿದೆ. ಇದು ಕ್ರಿಕೆಟ್ ಪಂದ್ಯದ ವೇಳೆ ಫಿಕ್ಸಿಂಗ್‌ನಲ್ಲಿ ಭಾಗವಹಿಸುವುದು ಅಥವಾ ಪಂದ್ಯಗಳ ಫಲಿತಾಂಶದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವುದರ ಭಾಗವಾಗಿದೆ.
ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸಮನ್ ಗೆ ಎಲ್ಲಾ ರೀತಿಯ ಕ್ರಿಕೆಟ್ ನಿಂದ ನಿಷೇಧ
Published by Jyoti Angadi
17 ಆಗಸ್ಟ್ 2025