* ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರು ಡಿಸೆಂಬರ್ 15ರಿಂದ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
* ಲಂಕಾ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ದಿಸ್ಸನಾಯಕೆ ಅವರ ಭಾರತದ ಮೊದಲ ಭೇಟಿ ಇದಾಗಲಿದ್ದು, ಉಭಯ ದೇಶಗಳ ನಡುವಿನ ಬಾಂಧವ್ಯ ಸುಧಾರಿಸಲಿದೆ. ಎಂದು ಶ್ರೀಲಂಕಾ ಸಂಪುಟದ ವಕ್ತಾರ ನಲಿಂದಾ ಜಯತಿಷ್ಟೆ ತಿಳಿಸಿದ್ದಾರೆ.
* ಭೇಟಿ ವೇಳೆ ಹಲವು ಕ್ಷೇತ್ರಗಳಲ್ಲಿ ಒಪ್ಪಂದಗಳು ಏರ್ಪಡುವ ಸಾಧ್ಯತೆಗಳಿವೆ. ದಿಸ್ಸನಾಯಕೆ ಅವರ ಜತೆ ವಿದೇಶಾಂಗ ಸಚಿವ ವಿಜಿತಾ ಹೇರಾತ್ ಮತ್ತು ಹಣಕಾಸು ಖಾತೆ ಸಹಾಯಕ ಸಚಿವ ಅನಿಲ್ ಜಯಂತ ಫರ್ನಾಂಡೋ ಕೂಡ ಆಗಮಿಸಲಿದ್ದಾರೆ.
* ಲಂಕಾ ಅಧ್ಯಕ್ಷೀಯ ಚುನಾವಣೆ ನಂತರ ದಿಸ್ಸನಾಯಕೆ ಅವರನ್ನು ಭೇಟಿಯಾಗಿದ್ದ ಭಾರತದ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ದಿಲ್ಲಿಗೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದ್ದರು.
* ಭಾರತ ಪ್ರವಾಸದ ವೇಳೆ ದಿಸ್ಸನಾಯಕೆ ಅವರು ರಾಷ್ಟ್ರವತಿ ಬ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದು, ದ್ವಿಪಕ್ಷೀಯ ಬಾಂಧವ್ಯದ ಕುರಿತು ಮಾತುಕತೆ ನಡೆಸಲಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ದಿಸ್ಸನಾಯಕೆ ಡಿ.15ರಂದು ಭಾರತ ಭೇಟಿ
Published by
Jyoti Angadi
12 ಡಿಸೆಂಬರ್ 2024