* ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದಲ್ಲಿದ್ದ ಹಿರಿಯ ಗೋಲ್ ಕೀಪರ್ ಪಿ. ಆರ್‌. ಶ್ರೀಜೇಶ್ ಅವರು ನಿವೃತ್ತಿ ಹೊಂದಿದ್ದು, ಅವರ ಜೆರ್ಸಿ ಸಂಖ್ಯೆ 16ಕ್ಕೆ ಸೀನಿಯರ್ ಮಟ್ಟದಲ್ಲಿ ವಿದಾಯ ಹೇಳಲು ಹಾಕಿ ಇಂಡಿಯಾ ನಿರ್ಧರಿಸಿದೆ. 
* ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಶ್ರೀಜೇಶ್ ಅವರು ಪ್ರಮುಖ ಪಾತ್ರ ವಹಿಸಿದ್ದರು.
* 'ಭಾರತ ತಂಡದ ಯಾವುದೇ ಸೀನಿಯರ್ ಆಟಗಾರನಿಗೆ ಇನ್ನು ಮುಂದೆ 16ನೇ ನಂಬರ್ ಜೆರ್ಸಿ ನೀಡಲಾಗುವುದಿಲ್ಲ. ಆದರೆ ಜೂನಿಯರ್ ಹಂತದ ತಂಡದಲ್ಲಿ ಈ ನಂಬರ್ ಚಲಾವಣೆಯಲ್ಲಿರುತ್ತದೆ' ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಅವರು ತಿಳಿಸಿದರು.
* ಶ್ರೀಜೇಶ್​ ಅವರಿಗೆ ಹಾಕಿ ಇಂಡಿಯಾ(Hockey India) ಭಾರತ ಜೂನಿಯರ್ ಪುರುಷರ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ. 
* 36 ವರ್ಷದ ಕೇರಳದ ಶ್ರೀಜೇಶ್‌ ಅವರು ಭಾರತ ಪರ 336 ಪಂದ್ಯಗಳನ್ನು ಆಡಿದ್ದಾರೆ. 2 ಒಲಿಂಪಿಕ್ಸ್‌ ಕಂಚಿನ ಪದಕ, ಏಷ್ಯನ್‌ ಗೇಮ್ಸ್‌ನಲ್ಲಿ 2 ಚಿನ್ನ, 1 ಕಂಚು, ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 2 ಬೆಳ್ಳಿ, ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ 2 ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.