ಶಹಜಾದ್ ಭಟ್ಟಿನೆಟ್ ವರ್ಕ್ (SBN) 'ಭಯೋತ್ಪಾದಕ ಸಂಘಟನೆ' ಎಂದು ಘೋಷಣೆ: ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಪಾಕಿಸ್ತಾನ ಮೂಲದ ಶಹಜಾದ್ ಭಟ್ಟಿನೆಟ್ ವರ್ಕ್ (SBN) ಅನ್ನು ಕೇಂದ್ರ ಗೃಹ ಸಚಿವಾಲಯವು ಅಧಿಕೃತವಾಗಿ 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿದೆ.
ಭಾರತೀಯ ವಿಮಾನಗಳ ಮೇಲಿನ ವಾಯುಪ್ರದೇಶ ನಿಷೇಧ ವಿಸ್ತರಿಸಿದ ಪಾಕಿಸ್ತಾನ: ಭಾರತೀಯ ವಿಮಾನಗಳು ತಮ್ಮ ದೇಶದ ವಾಯುಪ್ರದೇಶವನ್ನು (Airspace) ಬಳಸುವುದಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ಪಾಕಿಸ್ತಾನವು ಮತ್ತೊಂದು ತಿಂಗಳ ಅವಧಿಗೆ ವಿಸ್ತರಿಸಿದೆ.   
ಯಮುನಾ ನದಿ ಪುನರುಜ್ಜಿವನಕ್ಕೆ 'ಕಿಶಾವೂ ಬಹುಉದ್ದೇಶಿತ ಅಣೆಕಟ್ಟು ಯೋಜನೆ' ಒಪ್ಪಂದ: ಯಮುನಾ ನದಿಯ ಪುನರುಜ್ಜಿವನ ಹಾಗೂ ಜಲಸಂಪನ್ಮೂಲ ನಿರ್ವಹಣೆಗಾಗಿ ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ ರಾಜ್ಯಗಳ ಮುಖ್ಯಮಂತ್ರಿಗಳು 'ಕಿಶಾವೂ ಬಹುಉದ್ದೇಶಿತ ಅಣೆಕಟ್ಟು ಯೋಜನೆ' ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಬಾಂಗ್ಲಾದೇಶಕ್ಕೆ 500 ಟನ್ ಇಲಿಷಾ ಮೀನು ರಫ್ತು: ಭಾರತೀಯ ಮೀನುಗಾರಿಕೆಗೆ ಉತ್ತೇಜನ
ಭಾರತೀಯ ಮೀನುಗಾರಿಕಾ ಆರ್ಥಿಕತೆಗೆ, ವಿಶೇಷವಾಗಿ ಪಶ್ಚಿಮ ಬಂಗಾಳಕ್ಕೆ ದೊಡ್ಡ ಉತ್ತೇಜನ ಸಿಕ್ಕಿದ್ದು, ಕಳೆದ ಎರಡು ತಿಂಗಳುಗಳಲ್ಲಿ ಭಾರತವು ಸುಮಾರು 500 ಟನ್ ಇಲಿಷಾ (Ilisha) ಮೀನುಗಳನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡಿದೆ.
ಪುಣೆ ವಿಮಾನ ನಿಲ್ದಾಣದಲ್ಲಿ 24 ದಿನಗಳ 'ಯಾತ್ರಿ ಸೇವಾ ಅಭಿಯಾನ' ಆರಂಭ: ವಿಮಾನ ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸಲು, ದೂರು ಪರಿಹಾರ ಹಾಗೂ ಮಾರ್ಗದರ್ಶನ ಒದಗಿಸಲು ಪುಣೆ ವಿಮಾನ ನಿಲ್ದಾಣದಲ್ಲಿ 24 ದಿನಗಳ ವಿಶೇಷ 'ಯಾತ್ರಿ ಸೇವಾ ಅಭಿಯಾನ'ಕ್ಕೆ ಚಾಲನೆ ನೀಡಲಾಗಿದೆ.
2013ರ ಜಿರಾಮ್ ಘಾಟಿ ನಕ್ಸಲ್ ದಾಳಿ ಪ್ರಕರಣ: 10 ಅಪರಾಧಿಗಳಿಗೆ ಮರಣದಂಡನೆ: 2013ರಲ್ಲಿ ನಡೆದ ಭೀಕರ ಜಿರಾಮ್ ಘಾಟಿ ನಕ್ಸಲ್ ದಾಳಿ ಪ್ರಕರಣದಲ್ಲಿ ಎನ್‍ಐಎ (NIA) ವಿಶೇಷ ನ್ಯಾಯಾಲಯವು ಎಲ್ಲಾ 10 ಮಂದಿ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಎಐ ಅಭಿವೃದ್ಧಿಗೆ ತಾತ್ಕಾಲಿಕ ತಡೆ ಬೇಡಿಕೆಯನ್ನು ತಿರಸ್ಕರಿಸಿದ ಡೊನಾಲ್ಡ್ ಟ್ರಂಪ್: ಚೀನಾದೊಂದಿಗಿನ ತಂತ್ರಜ್ಞಾನ ಸ್ಪರ್ಧೆಯ ಹಿನ್ನೆಲೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಅಭಿವೃದ್ಧಿಗೆ ತಾತ್ಕಾಲಿಕ ವಿರಾಮ ನೀಡಬೇಕೆಂಬ ತಂತ್ರಜ್ಞಾನ ಕ್ಷೇತ್ರದ ಕೆಲವರ ಬೇಡಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ.