➤ ಇಂಡಿಗೋ ನೇರ ವಿಮಾನ ಸೇವೆ: ನೋಯ್ಡಾ ಮತ್ತು ಮುಂಬಯಿಂದ ರಾಜಸ್ಥಾನದ ಉದಯಪುರಕ್ಕೆ ಇಂಡಿಗೋ ಸಂಸ್ಥೆಯು ನೇರ ವಿಮಾನ ಸೇವೆಯನ್ನು ಆರಂಭಿಸುತ್ತಿದೆ.
➤ ಜೋಶ್ (JOSH) ತಂಡಗಳ ಚಾಲನೆ: ಕ್ಷಯರೋಗ ಮುಕ್ತ ಭಾರತ ಅಭಿಯಾನಕ್ಕೆ ಶಕ್ತಿ ತುಂಬಲು ಕೇಂದ್ರ ಆರೋಗ್ಯ ಸಚಿವಾಲಯವು ದೇಶಾದ್ಯಂತ 'ಜೋಶ್' ತಂಡಗಳಿಗೆ ಚಾಲನೆ ನೀಡಿದೆ.
➤ ಪಂಜಾಬ್ ಕಾಯಂ ಡಿಜಿಪಿ ನೇಮಕ: ಪಂಜಾಬ್ ಸರಕಾರವು 1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಗೌರವ್ ಯಾದವ್ ಅವರನ್ನು ರಾಜ್ಯದ ಕಾಯಂ ಪೊಲೀಸ್‌ ಮಹಾನಿರ್ದೇಶಕರನ್ನಾಗಿ ನೇಮಿಸಿದೆ.
➤ ಅಸ್ಸಾಂ-ಬಾಂಗ್ಲಾದೇಶ ಜಲಸಾರಿಗೆ ಪುನರಾರಂಭ: ಅಸ್ಸಾಂನ ಬೋಗಿಬೀಲ್‌ನಿಂದ ಬಾಂಗ್ಲಾದೇಶಕ್ಕೆ ಬ್ರಹ್ಮಪುತ್ರ ನದಿಯ ರಾಷ್ಟ್ರೀಯ ಜಲಮಾರ್ಗ-2ರ ಮೂಲಕ ಮೊದಲ ಸರಕು ನೌಕೆ ಪಯಣ ಬೆಳೆಸುವುದರೊಂದಿಗೆ 70 ವರ್ಷಗಳ ನಂತರ ಜಲಸಾರಿಗೆ ವ್ಯಾಪಾರಕ್ಕೆ ಮರುಜೀವ ಸಿಕ್ಕಿದೆ.
➤ ನಗದುರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ: ದಿಲ್ಲಿ ಜಲ ಮಂಡಳಿಯ 50,000ಕ್ಕೂ ಹೆಚ್ಚು ಪಿಂಚಣಿದಾರರಿಗೆ ಸೇವಾ ಸಂಕಲ್ಪ ಅಭಿಯಾನದಡಿ ನಗದುರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ.
➤ ದೇಶದ ಮೊದಲ 'ಮೈಸ್' ಪೋರ್ಟಲ್ ಆರಂಭ: ವ್ಯಾಪಾರ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಒಡಿಶಾ ಸರಕಾರವು ದೇಶದ ಮೊದಲ 'ಮೈಸ್' (MICE) ಇನ್ಸೆಂಟಿವ್ ಪೋರ್ಟಲ್ ಅನ್ನು ಆರಂಭಿಸಿದೆ.
➤ ಐಸಿಸಿ ತಿಂಗಳ ಶ್ರೇಷ್ಠ ಆಟಗಾರ್ತಿ ನಾಮನಿರ್ದೇಶನ: ಸೆಪ್ಟೆಂಬರ್ 2026ರ ಐಸಿಸಿ 'ತಿಂಗಳ ಶ್ರೇಷ್ಠ ಮಹಿಳಾ ಆಟಗಾರ್ತಿ' ಪ್ರಶಸ್ತಿಗೆ ಭಾರತದ ಶೆಫಾಲಿ ವರ್ಮಾ, ಶ್ರೀಚರಣಿ ಹಾಗೂ ಶ್ರೀಲಂಕಾದ ಚಾಮರಿ ಅಥಪತ್ತು ನಾಮನಿರ್ದೇಶನಗೊಂಡಿದ್ದಾರೆ.
➤ ಅಮೆರಿಕ ಅಧ್ಯಕ್ಷರ ಪ್ರತಿಮೆ ಅನಾವರಣ: 23 ಕ್ಯಾರೆಟ್ ಚಿನ್ನದ ಲೇಪನವಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ 'ದಿ ಆರೆಂಜ್ ಪ್ಲೇಗ್' ಹೆಸರಿನ ಪ್ರತಿಮೆಯನ್ನು ಸ್ಟ್ರಾಸ್‌ಬರ್ಗ್‌ನಲ್ಲಿ ಅನಾವರಣಗೊಳಿಸಲಾಗಿದೆ.
➤ ಎಸ್‌ಎಂಇ ಗ್ರೋತ್ ಫಂಡ್‌ ಸ್ಥಾಪನೆಗೆ ಅನುಮೋದನೆ: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ನೇರ ಇಕ್ವಿಟಿ ಹೂಡಿಕೆಗಾಗಿ 10,000 ಕೋಟಿ ರೂ. ಮೊತ್ತದ 'ಎಸ್‌ಎಂಇ ಗ್ರೋತ್ ಫಂಡ್‌' ನಿಧಿ ಸ್ಥಾಪನೆ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.