* ಭಾರತವು ಇತ್ತೀಚೆಗೆ ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದವನ್ನು ರದ್ದುಗೊಳಿಸಿದ್ದರಿಂದ ಪ್ರತಿಕ್ರಿಯೆಯಾಗಿ ಪಾಕಿಸ್ತಾನವು 1972ರ ಶಿಮ್ಲಾ ಒಪ್ಪಂದವನ್ನು ಅಮಾನತುಗೊಳಿಸಿದೆ.
* ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ಪಾಕಿಸ್ತಾನ ವಿರುದ್ಧ ಹಲವು ಭದ್ರತಾ ಕ್ರಮಗಳನ್ನು ಕೈಗೊಂಡಿತ್ತು.
* ಇದಕ್ಕೆ ಪಾಕಿಸ್ತಾನ ನಾಟಕೀಯವಾಗಿ ಪ್ರತಿಕ್ರಿಯಿಸಿ, ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ವಾಯುಪ್ರದೇಶವನ್ನು ಮುಚ್ಚಿದಷ್ಟೇ ಅಲ್ಲದೆ, ಎಲ್ಲಾ ದ್ವಿಪಕ್ಷೀಯ ವ್ಯವಹಾರಗಳನ್ನು ಸ್ಥಗಿತಗೊಳಿಸಿತು.
ಶಿಮ್ಲಾ ಒಪ್ಪಂದ :
* ಶಿಮ್ಲಾ ಒಪ್ಪಂದವು 1971ರ ಯುದ್ಧದ ನಂತರ ಇಂದಿರಾ ಗಾಂಧಿ ಮತ್ತು ಜುಲ್ಫಿಕರ್ ಅಲಿ ಭುಟ್ಟೋ ಸಹಿ ಹಾಕಿದ ಒಪ್ಪಂದವಾಗಿದ್ದು, ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೂ ದಾರಿ ಮಾಡಿತ್ತು. ಈ ಒಪ್ಪಂದವು ಭಾರತದ ಹಾಗೂ ಪಾಕಿಸ್ತಾನದ ನಡುವೆ ಶಾಂತಿಯುತ ಸಂಬಂಧ ಮತ್ತು ಸಮಸ್ಯೆಗಳ ದ್ವಿಪಕ್ಷೀಯ ಪರಿಹಾರಕ್ಕೆ ಅಡಿಪಾಯವಾಗಿತ್ತು. ಇದರಡಿಯಲ್ಲಿ ನಿಯಂತ್ರಣ ರೇಖೆ (LoC) ಅನ್ನು ಗೌರವಿಸುವ ಬಗ್ಗೆ ಒಪ್ಪಂದವಾಯಿತು.
* ಪಾಕಿಸ್ತಾನ ಶಿಮ್ಲಾ ಒಪ್ಪಂದವನ್ನು ರದ್ದುಗೊಳಿಸಿರುವುದು ಕೆಲವೊಂದು ರೀತಿಯಲ್ಲಿ ಭಾರತಕ್ಕೆ ಲಾಭದಾಯಕವಾಗಿದೆ. ಶಿಮ್ಲಾ ಒಪ್ಪಂದದಡಿಯಲ್ಲಿ LoC ಅನ್ನು ಬದಲಾಯಿಸದಿರುವುದು ಬದ್ಧತೆ ಇತ್ತು.
* ಈಗ ಪಾಕಿಸ್ತಾನ ಒಪ್ಪಂದವನ್ನು ತಿರಸ್ಕರಿಸಿದ್ದರಿಂದ, ಭಾರತ LoC ಬಗ್ಗೆ ತನ್ನ ನಿಲುವನ್ನು ಪುನರ್ಮೌಲ್ಯಮಾಪನ ಮಾಡಬಹುದಾಗಿದೆ. ಭೂಪ್ರದೇಶದ ನಿಯಂತ್ರಣ ಬದಲಾವಣೆಗೆ ಸಾಧ್ಯತೆಗಳೂ ಉದಯವಾಗಿವೆ.
* ಇದಲ್ಲದೆ, ಪಾಕಿಸ್ತಾನವು ಈ ಹಿಂದೆ ಶಿಮ್ಲಾ ಒಪ್ಪಂದವನ್ನು ಉಲ್ಲಂಘಿಸಿದ ಉದಾಹರಣೆಗಳು ಇದ್ದವು, ಉದ್ದೇಶಪೂರ್ವಕವಾಗಿ LoC ದಾಟಿದ ಸಂದರ್ಭಗಳು ಇವೆ.
* ಇದರಿಂದ ಪಾಕಿಸ್ತಾನವು ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿದಂತಾಗಿದೆ ಎಂಬ ಚರ್ಚೆಗಳು ರಾಜತಾಂತ್ರಿಕ ವಲಯದಲ್ಲಿ ಮುಂದುವರೆದಿವೆ. ಶಿಮ್ಲಾ ಒಪ್ಪಂದ ರದ್ದಾದಾಗ, ದ್ವಿಪಕ್ಷೀಯ ಮಾತುಕತೆಗಳ ಮೂಲಧಾರೆ ಅಸ್ತಿತ್ವದಲ್ಲಿಲ್ಲದ ಕಾರಣ, ಭಾರತ ಇನ್ನು ಮುಂದೆ ಗಡಿಪ್ರಶ್ನೆಗಳಿಗೆ ಏಕಪಕ್ಷೀಯವಾಗಿ ನಿಲುಕುವ ಸಾಧ್ಯತೆಯಿದೆ.
ಶನಿವಾರ, 26 ಎಪ್ರಿಲ್ 2025
1:09 ಅಪರಾಹ್ನ
Daily PDF
ಶಿಮ್ಲಾ ಒಪ್ಪಂದ ಅಮಾನತುಗೊಳಿಸಿದ ಪಾಕಿಸ್ತಾನ
Authored by:
Jyoti Angadi