* ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಅವರು ಸೆಪ್ಟೆಂಬರ್ 21ರಂದು ಕ್ವಾಡ್ ರಾಷ್ಟ್ರಗಳ ಶೃಂಗಸಭೆಯನ್ನು ಆಯೋಜಿಸಿದ್ದಾರೆ.
* ಈ ಶೃಂಗ ಸಭೆಯಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ನ ಪ್ರಧಾನಮಂತಿಗಳು ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷರ ವಕ್ತಾರರು ತಿಳಿಸಿದ್ದಾರೆ.
* ಭಾರತವು ಈ ವರ್ಷ ನಡೆಸಬೇಕಿದ್ದ ಕ್ವಾಡ್ ಶೃಂಗಸಭೆಯನ್ನು ಮುಂದಿನ ವರ್ಷ ಆಯೋಜಿಸಲಾಗಿದೆ.
* ಜೋ ಬೈಡನ್ ಅವರ ಅಧ್ಯಕ್ಷ ಹುದ್ದೆಯ ಅಧಿಕಾರವು ಕೆಲವೇ ತಿಂಗಳುಗಳ ಕಾಲ ಉಳಿದಿರುವಂತೆಯೇ, ಅವರು ಕ್ವಾಡ್ ಶೃಂಗ ಸಭೆ ಆಯೋಜಿಸುವ ಮೂಲಕ ವಿದೇಶಾಂಗ ನೀತಿಯ ಪರಂಪರೆಯನ್ನು ಮುಂದುವರೆಸುವ ಪ್ರಯತ್ನವನ್ನು ನಡೆಸಿದ್ದಾರೆ.
* ಕ್ವಾಡ್ ರಾಜತಾಂತ್ರಿಕ ಸಹಭಾಗಿತ್ವದ ಒಕ್ಕೂಟವಾಗಿದ್ದು, ಭಾರತ, ಆಸ್ಟ್ರೇಲಿಯಾ ಹಾಗು ಜಪಾನ ಸದಸ್ಯ ರಾಷ್ಟ್ರಗಳಾಗಿವೆ.
* ಆಸ್ಟ್ರೇಲಿಯಾದ ಪ್ರಧಾನಿ ಅಂಥೋನಿ ಅಲ್ಬನಿಸ್, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ನ್ ಪ್ರಧಾನಿ ಫ್ಯೂಮಿಯೋ ಕಿಶಿಡಾ ಅವರನ್ನು ಸ್ವಾಗತಿಸಲು ಎದುರು ನೋಡುತಿದ್ದರೆ.
ಸೆಪ್ಟೆಂಬರ್ 21ರಂದು ಕ್ವಾಡ್ ಶೃಂಗ ಸಭೆ ಆಯೋಜಿಸಿದ ಜೋ ಬೈಡನ್
Published by Jyoti Angadi
14 ಸೆಪ್ಟೆಂಬರ್ 2024