* ನವಿಕರಿಸಬಹುದಾದ ಇಂಧನ ಅಳವಡಿಕೆಯಲ್ಲಿ ದಿಯು ರಾಷ್ಟ್ರೀಯ ಮಾದರಿಯಾಗಿದ್ದು, ತನ್ನ ಸಂಪೂರ್ಣ ಹಗಲಿನ ವಿದ್ಯುತ್ ಬೇಡಿಕೆಯನ್ನು ಸೌರಶಕ್ತಿಯಿಂದ ಪೂರೈಸಲಾಗುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
* ದಿಯು 11.88 ಮೆಗಾವ್ಯಾಟ್ ಮೇಲ್ಚಾವಣಿ ಸಾಮರ್ಥ್ಯವನ್ನು ಸಾಧಿಸಿ, ಭಾರತದ ಮೊದಲ ಸಂಪೂರ್ಣ ಸೌರಶಕ್ತಿ ಅವಲಂಬಿತ ಜಿಲ್ಲೆಯಾಗಿದ್ದು, ಮಹತ್ವದ ಮೈಲಿಗಲ್ಲು ತಲುಪಿದೆ ಎಂದು ಅವರು ಹೇಳಿದರು.
* ಸಚಿವರು ದಿಯುನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, ಫುಡಾಮ್ಲಲ್ಲಿರುವ 9 ಮೆಗಾವ್ಯಾಟ್ ಸೌರ ಪಾರ್ಕ್ ಸೇರಿ ವಿವಿಧ ಸೌಲಭ್ಯಗಳಿಗೆ ಭೇಟ
ನೀಡಿದರು.
* ಫುಡಮ್ ಸೌರ ಪಾರ್ಕ್ ಪ್ರಸರಣ ನಷ್ಟವನ್ನು ಕಡಿಮೆ ಮಾಡುವುದು, ಶುದ್ಧ ಇಂಧನ ಪೂರೈಕೆ ಹಾಗೂ ಕಡಿಮೆ ವಿದ್ಯುತ್ ವೆಚ್ಚದ ಮೂಲಕ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಚಿವರು ಹೇಳಿದರು.
ಸೌರಶಕ್ತಿಯಿಂದ ಸಂಪೂರ್ಣ ವಿದ್ಯುತ್ ಪೂರೈಕೆ ಸಾಧಿಸಿದ ರಾಷ್ಟ್ರೀಯ ಮಾದರಿ ಜಿಲ್ಲೆ ದಿಯು
Published by Jyoti Angadi
31 ಮೇ 2025