* ರಾಜ್ಯದಲ್ಲಿ ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಸಂವಹನದ ಕುರಿತು ಜಾಗೃತಿ ಮೂಡಿಸಲು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕರೆದಾರರ ಗುರುತು (ಕಾಲರ್ ಐಡಿ) ಹಾಗೂ ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆ (ಡಿಐಟಿ) ಯೊಂದಿಗೆ ತಂತ್ರಾಂಶ ಹೊಂದಿರುವ ಟ್ರೂಕಾಲರ್ ಕಂಪನಿಯೊಂದಿಗೆ 'ಲೆಟರ್ ಆಫ್ ಇಂಟೆಂಟ್' ಗೆ ಫೆಬ್ರುವರಿ 05 ರಂದು ಒಪ್ಪಂದ ಮಾಡಿಕೊಂಡಿತು.
* ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಟ್ರೂ ಕಾಲರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಿಷಿತ್ ಜುಂಜುನ್ ವಾಲಾ ಅವರ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
* ಈ ಯೋಜನೆಯಡಿ, ಟ್ರೂ ಕಾಲರ್ ಕಂಪನಿಯು ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಸಂವಹನ ಕುರಿತು ಜಾಗೃತಿ ಮೂಡಿಸಲು ಸರಣಿ ಕಾರ್ಯಕ್ರಮಗಳನ್ನು ನಡೆಸಲಿದೆ. ಸೈಬರ್ ವಂಚನೆ ತಡೆಗೆ ಕನ್ನಡದಲ್ಲೂ ತರಬೇತಿ ನೀಡಲಿದೆ.
ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಸಂವಹನದ ಜಾಗೃತಿ ಮೂಡಿಸಲು ಟ್ರೂಕಾಲರ್ ಜೊತೆ ರಾಜ್ಯ ಸರ್ಕಾರ ಒಪ್ಪಂದ
Published by Akshata Halli
07 ಫೆಬ್ರವರಿ 2024