* ದೀರ್ಘಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದ 83 ವರ್ಷ ವಯಸ್ಸಿನ ಖ್ಯಾತ ಉರ್ದು ಸಾಹಿತಿ, ಶಿಕ್ಷಣ ತಜ್ಞ ಶೇಖ್ ಅಬ್ದಲ್ ಸಲಾಮ್ ಅಬ್ದುರ್ ರಜಾಕ್ ಅವರು 'ಮುಂಬಯಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
* 2004ರಲ್ಲಿ ಉರ್ದು ಸಾಹಿತ್ಯಕ್ಕೆ ಅವರಿಗೆ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. 1941ರಲ್ಲಿ ಒಡಿಶಾದ ರಾಯಗಡ ಜಿಲ್ಲೆಯ ಪನ್ವೇಲ್‌ನಲ್ಲಿ ಜನಿಸಿದ ಅಬ್ದುರ್ ರಜಾಕ್ ಇವರು ಜನರ ನೋವನ್ನು ತಮ್ಮ ಕತೆ-ಕವನಗಳ ಮೂಲಕ ಕಟ್ಟಿಕೊಡುತ್ತಿದ್ದರು.
* ಅಬ್ದುರ್ ರಜಾಕ್ ಅವರು ರಚಿಸಿದ್ದ ಕಾದಂಬರಿಗಳನ್ನು 1970ರಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರ ಮಾಡಲಾಯಿತು.
* ರಝಾಕ್ ಅವರು 2004 ರಲ್ಲಿ ತಮ್ಮ ಮೆಚ್ಚುಗೆ ಪಡೆದ ಸಣ್ಣ ಕಥೆಗಳ ಸಂಕಲನ ‘ಶಿಕಾಸ್ತ ಬಟನ್ ಕೆ ದಾರ್ಮಿಯಾನ್’ ಗಾಗಿ ಉರ್ದು ಸಾಹಿತ್ಯಕ್ಕಾಗಿ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.
ಸಾಹಿತಿ, ಶಿಕ್ಷಣ ತಜ್ಞ ಅಬ್ದುರ್ ರಜಾಕ್ ನಿಧನ
Published by Bhagya R K
11 ಮೇ 2024