* ಜರ್ಮನಿಯ ಲಿಂಡೌನಲ್ಲಿ ಆರಂಭವಾದ 74ನೇ ಲಿಂಡೌ ಸಮ್ಮೇಳನದಲ್ಲಿ ಗಂಗಾವತಿಯ ಯುವ ವಿಜ್ಞಾನಿ ನಸೀಮ್ ಕೌಸರ್ ಭಾಗವಹಿಸುತ್ತಿದ್ದಾರೆ. ಈ ಸಮ್ಮೇಳನ ಜುಲೈ 4ರವರೆಗೆ ನಡೆಯಲಿದೆ.
* ನಸೀಮ್ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕಿ. ಅವರು ಗಂಗಾವತಿಯ ಉರ್ದು ಹೈಸ್ಕೂಲಿನ ಮುಖ್ಯೋಪಾಧ್ಯಾಯ ಎಂ.ಬಿ. ಕೊಪ್ಪಳ ಹಾಗೂ ಸೂಫಿಯಾ ಬೇಗಂ ದಂಪತಿಯ ಪುತ್ರಿ.
* ಈ ಜಾಗತಿಕ ಸಮ್ಮೇಳನದಲ್ಲಿ ನೊಬೆಲ್ ವಿಜೇತರೊಂದಿಗೆ 600 ಯುವ ವಿಜ್ಞಾನಿಗಳು ಚರ್ಚೆ ನಡೆಸುತ್ತಾರೆ. ಭಾರತದಿಂದ 29 ಮಂದಿ ವಿಜ್ಞಾನಿಗಳು ಆಯ್ಕೆಯಾಗಿದ್ದು, ಅವರ ಎಲ್ಲಾ ಖರ್ಚುಗಳನ್ನು ಡಿಎಸ್‌ಟಿ ಇಲಾಖೆ ಭರಿಸುತ್ತಿದೆ.
* ಈ ಆಯ್ಕೆ ಸಂತಸದ ವಿಷಯವಾಗಿದ್ದು, “ಇದು ಮಗಳ ಸಾಧನೆಗೆ ಹೊಸ ಪ್ರೇರಣೆ” ಎಂದು ನಸೀಮ್ ತಂದೆ ಎಂ.ಬಿ. ಕೊಪ್ಪಳ ತಿಳಿಸಿದ್ದಾರೆ.
ರಸಾಯನಶಾಸ್ತ್ರದ ವಿಶ್ವ ದುಂಡು ಮೇಜಿನ ಸಭೆಗೆ ಗಂಗಾವತಿಯ ಯುವ ವಿಜ್ಞಾನಿ ನಸೀಮ್ ಆಯ್ಕೆ
Published by Jyoti Angadi
01 ಜುಲೈ 2025