* ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ ಶೇ.50ರಷ್ಟು ತೆರಿಗೆಯಿಂದ ಸಂಕಷ್ಟಕ್ಕೀಡಾದ ಭಾರತೀಯ ರಫ್ತುದಾರರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಪರ್ಯಾಯ ಕ್ರಮಗಳನ್ನು ರೂಪಿಸುತ್ತಿದೆ.
* ಸರ್ಕಾರದ ಮೂಲಗಳ ಪ್ರಕಾರ, ರಫ್ತುದಾರರ ಸಮಸ್ಯೆಗಳನ್ನು ಗುರುತಿಸಿ, ಅವರಿಗೆ ಸಹಾಯ ಮಾಡಲು ಕ್ರಮಗಳನ್ನು ಕೈಗೊಳ್ಳುವ ಕಾರ್ಯ ಆರಂಭವಾಗಿದೆ.
* ಅಮೆರಿಕ ಹೊರತುಪಡಿಸಿ ಇತರೆ ದೇಶಗಳಿಗೆ ರಫ್ತು ವಿಸ್ತರಿಸುವುದು, ಹೊಸ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಅನುಷ್ಠಾನಗೊಳಿಸುವುದು, ರಫ್ತುದಾರರಿಗೆ ವಿವಿಧ ರೀತಿಯ ಬೆಂಬಲ ನೀಡುವುದು ಮತ್ತು ದೇಶೀಯ ಮಾರುಕಟ್ಟೆಗಳ ಬೆಳವಣಿಗೆಗೆ ಒತ್ತು ನೀಡುವ ಕುರಿತು ಚಿಂತನೆ ನಡೆಯುತ್ತಿದೆ.
* ಇದೇ ರೀತಿ, ತೆರಿಗೆ ಹೊಡೆತಕ್ಕೊಳಗಾದ ವಲಯಗಳ ರಫ್ತುದಾರರಿಗೆ ತುರ್ತು ಸಾಲ ಸಿಗಲು ಸರ್ಕಾರವೇ ಖಾತರಿ ನೀಡುವುದು, ರಫ್ತು ಸಾಲದ ಮರುಪಾವತಿಗೆ ಸಮಯಾವಕಾಶ ಕಲ್ಪಿಸುವುದು, ರಫ್ತು ಮಾಡಿದ ವಸ್ತುಗಳಿಗೆ ಹಣ ಸ್ವೀಕೃತಿ ವಿಳಂಬವಾದಲ್ಲಿ ನೆರವು ನೀಡುವಂತಹ ಕ್ರಮಗಳನ್ನು ಕೂಡ ಸರ್ಕಾರ ಪರಿಶೀಲಿಸುತ್ತಿದೆ.
ರಫ್ತುದಾರರಿಗೆ ಟ್ರಂಪ್ ತೆರಿಗೆ ಹೊರೆ ತಪ್ಪಿಸಲು ಮೋದಿ ಪರ್ಯಾಯ ಕ್ರಮ
Published by Jyoti Angadi
29 ಆಗಸ್ಟ್ 2025