* ಭಾರತದ ರಕ್ಷಣಾ ಉತ್ಪಾದನೆಯು 2023-24ರ ಸಾಲಿನಲ್ಲಿ ಭಾರತದ ರಕ್ಷಣಾ ವಲಯದ ಸಾಮಗ್ರಿಗಳ ಉತ್ಪಾದನೆಯು ದಾಖಲೆಯ ಗರಿಷ್ಠ1.27 ಲಕ್ಷ ಕೋಟಿಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
* ದೇಶವು ಈಗ 90 ಕ್ಕೂ ಹೆಚ್ಚು ಸ್ನೇಹಪರ ದೇಶಗಳಿಗೆ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಯಂತ್ರಾಂಶಗಳನ್ನು ರಫ್ತು ಮಾಡುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು (ಬುಧವಾರ) ಸೆಪ್ಟೆಂಬರ್ 25, ರಂದು ತಿಳಿಸಿದರು.
* ಈ ಬೆಳವಣಿಗೆಯು ಎನ್‌ಡಿಎ ಸರಕಾರದ ಬಹುಮುಖ್ಯವಾದ 'ಮೇಕ್ ಇನ್ ಇಂಡಿಯಾ' ಗೆ ಪೂರಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾರಂಭವಾದ ಈ ಉಪಕ್ರಮವು ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿದೆ.
* ರಕ್ಷಣಾ ಕೈಗಾರಿಕಾ ವಲಯದಲ್ಲಿ ದೇಶವು ಉತ್ತುಂಗಕ್ಕೇರಿದೆ ಎಂದು ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
* ದೇಶಿಯ ರಕ್ಷಣಾ ಉತ್ಪಾದನೆಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಿಶೇಷವಾಗಿ ಭಾರತ-ಚೀನಾ ಗಡಿಯಲ್ಲಿ ಆಧುನಿಕ
ತಂತ್ರಜ್ಞಾನ ಗಳೊಂದಿಗೆ ಮಿಲಿಟರಿಯನ್ನು ನಿಯೋಜಿಸಲಾಗಿದೆ.
* 2023-24ರಲ್ಲಿ ಮೊದಲ ಬಾರಿಗೆ ರಕ್ಷಣಾ ರಫ್ತು 21,000 ಕೋಟಿ ರೂ. ಆಗಿದೆ. ಐದು ವರ್ಷಗಳಲ್ಲಿ ಇದನ್ನು 50,000 ಕೋಟಿ ರೂ.ಗೆ ಹೆಚ್ಚಿಸುವ ಗುರಿಯನ್ನು ಸಚಿವಾಲಯ ಹೊಂದಿದೆ.
* ಭಾರತವು ಜಾಗತಿಕವಾಗಿ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರರಲ್ಲಿ ಒಂದಾಗಿದ್ದು, ಭಾರತೀಯ ಸಶಸ್ತ್ರ ಪಡೆಯು 2029ರ ವೇಳೆಗೆ ಸುಮಾರು 190 ಶತಕೋಟಿ ಡಾಲರ್ ಬಂಡವಾಳ ಸಂಗ್ರಹಿಸಿ, ಹೂಡಿಕೆ ಮಾಡುವ ನಿರೀಕ್ಷೆಯಿದೆ.
ಸೋಮವಾರ, 30 ಸೆಪ್ಟೆಂಬರ್ 2024
4:03 ಅಪರಾಹ್ನ
Daily PDF
ರಕ್ಷಣಾ ಸಾಮಗ್ರಿ ಉತ್ಪಾದನೆಯಲ್ಲಿ ಭಾರತ ಮುಂಚೂಣಿ
Authored by:
Bhagya R K