* ಜಾಗತಿಕ ರಿಯಲ್ ಎಸ್ಟೇಟ್ ಪಾರದರ್ಶಕ ಸೂಚ್ಯಂಕ 2024ರಲ್ಲಿ ಭಾರತವು 31ನೇ ಸ್ಥಾನ ಪಡೆದಿದೆ ಎಂದು ಗ್ಲೋಬಲ್ ಪ್ರಾಪರ್ಟಿ ಕನ್ಸಲ್ಟೆನ್ಸಿ ಜೆಎಲ್‌ಎಲ್ ವರದಿ ತಿಳಿಸಿದೆ.
*ಭಾರತದ ಶ್ರೇಣಿ-I ಮಾರುಕಟ್ಟೆಗಳು ಮೊದಲ ಬಾರಿಗೆ 2.44 ರ ಸಂಯೋಜಿತ ಸ್ಕೋರ್‌ನೊಂದಿಗೆ 'ಪಾರದರ್ಶಕ' ವಲಯಕ್ಕೆ ಪ್ರವೇಶಿಸಿವೆ ಎಂದು ತೋರಿಸಿದೆ. 89 ದೇಶಗಳ ಪಟ್ಟಿಯಲ್ಲಿ ಭಾರತವು ಗಮನಾರ್ಹವಾದ ಪ್ರಗತಿಯನ್ನು ಮಾಡಿದೆ, ಮೊದಲ ಬಾರಿಗೆ ಪಾರದರ್ಶಕ ಶ್ರೇಣಿಯನ್ನು ತಲುಪಿದೆ".
* ಜಾಗತಿಕ ಪಟ್ಟಿಯಲ್ಲಿ ಯುನೈಟೆಡ್ ಕಿಂಗ್‌ಡಮ್ ಅಗ್ರಸ್ಥಾನದಲ್ಲಿದೆ (1.24 ಅಂಕಗಳೊಂದಿಗೆ) ಫ್ರಾನ್ಸ್, ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಕೆನಡಾ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಐರ್ಲೆಂಡ್, ಸ್ವೀಡನ್, ಜರ್ಮನಿ, ಜಪಾನ್, ಬೆಲ್ಜಿಯಂ ಮತ್ತು ಸಿಂಗಾಪುರ್ ನಂತರದ ಸ್ಥಾನದಲ್ಲಿವೆ.
* ಪಾರದರ್ಶಕ ವಲಯದಲ್ಲಿ ಫಿನ್ಲೆಂಡ್ 22 ದೇಶಗಳಲ್ಲಿ ಅಗ್ರಸ್ಥಾನದಲ್ಲಿದೆ, ಹಾಂಗ್ ಕಾಂಗ್ SAR, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್, ಸ್ಪೇನ್, ಇಟಲಿ, ಪೋಲೆಂಡ್, ನಾರ್ವೆ, ಜೆಕ್ ರಿಪಬ್ಲಿಕ್, ಲಕ್ಸೆಂಬರ್ಗ್, ಹಂಗೇರಿ, ಪೋರ್ಚುಗಲ್, ಚೈನೀಸ್ ತೈಪೆ, ದಕ್ಷಿಣ ಕೊರಿಯಾ, ಯುಎಇ-ದುಬೈ, ದಕ್ಷಿಣ ಆಫ್ರಿಕಾ, ಚೀನಾ- ಶ್ರೇಣಿ 1, ಭಾರತ- ಶ್ರೇಣಿ 1, ಥೈಲ್ಯಾಂಡ್, ಮಲೇಷ್ಯಾ, ರೊಮೇನಿಯಾ ಮತ್ತು ಸ್ಲೋವಾಕಿಯಾ.
* ಉಳಿದ ದೇಶಗಳು ಅರೆ-ಪಾರದರ್ಶಕ, ಕಡಿಮೆ ಪಾರದರ್ಶಕತೆ ವಲಯಗಳಲ್ಲಿವೆ.
* ದೇಶದ ರಿಯಲ್ ಎಸ್ಟೇಟ್ ಕ್ಷೇತ್ರದ ಸುಧಾರಣೆಗಾಗಿ ರೇರಾ ಕಾಯ್ದೆ ಜಾರಿಯಾಗಿದೆ. ಇದರಡಿ ಹೂಡಿಕೆದಾರರಿಗೆ ರಕ್ಷಣೆ ಸಿಕ್ಕಿದೆ. ಭೂ ದಾಖಲೆಗಳ ಡಿಜಿಟಲೀಕರಣವು ಹೆಚ್ಚಿನ ಪಾರದರ್ಶಕತೆಗೆ ಒತ್ತು ನೀಡಿದೆ. ಇದು ರಿಯಾಲ್ಟಿ ವಲಯದ ಬೆಳವಣಿಗೆಗೆ ಸಹಕಾರಿಯಾಗಿದೆ' ಎಂದು ವರದಿ ಹೇಳಿದೆ.
ರಿಯಲ್ ಎಸ್ಟೇಟ್ ಪಾರದರ್ಶಕ ಸೂಚ್ಯಂಕ 2024ರಲ್ಲಿ ಭಾರತವು 31ನೇ ಸ್ಥಾನ
Published by Jyoti Angadi
28 ಆಗಸ್ಟ್ 2024