➤ ಈ ಪಕ್ಷಿಗಳು ಕಾಡಿನಲ್ಲಿ ಯಶಸ್ವಿಯಾಗಿ ಬದುಕುಳಿದು, ಸಂತಾನೋತ್ಪತ್ತಿ ಮಾಡುತ್ತಿವೆ ಎಂದು 'ಬರ್ಡ್ಸ್' (Birds) ಎಂಬ ಪೀರ್-ರಿವ್ಯೂಡ್ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನಾ ವರದಿಯು ದೃಢಪಡಿಸಿದೆ.
➤ ಯೋಜನೆಯ ಪ್ರಮುಖ ಮುಖ್ಯಾಂಶಗಳು:
- ಆವಾಸಸ್ಥಾನ: ವಿಶ್ವದಲ್ಲೇ ಏಷ್ಯಾಟಿಕ್ ಸಿಂಹಗಳ (Asiatic Lions) ಏಕೈಕ ನೈಸರ್ಗಿಕ ಆವಾಸಸ್ಥಾನವಾಗಿರುವ ಗಿರ್ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಧಾಮದಲ್ಲಿ (Gir National Park) ಈ ಯೋಜನೆಯನ್ನು ಕೈಗೊಳ್ಳಲಾಗಿದೆ.
- ಪಕ್ಷಿಗಳ ಸಂಖ್ಯೆ: ಒಟ್ಟು ಎರಡು ಹಂತಗಳಲ್ಲಿ 40 ಹಾರ್ನ್‌ಬಿಲ್‌ಗಳನ್ನು ಗಿರ್ ಅರಣ್ಯಕ್ಕೆ ಮುಕ್ತವಾಗಿ ಬಿಡಲಾಗಿದೆ.
- ತಂತ್ರಜ್ಞಾನದ ಬಳಕೆ: ಪಕ್ಷಿಗಳ ಚಲನವಲನ, ಸಂತಾನೋತ್ಪತ್ತಿ ಮತ್ತು ಅವುಗಳ ನಡವಳಿಕೆಯನ್ನು ನಿಖರವಾಗಿ ಟ್ರ್ಯಾಕ್ ಮಾಡಲು ಸ್ಯಾಟಲೈಟ್ ಟ್ರಾನ್ಸ್‌ಮಿಟರ್‌ಗಳನ್ನು (Satellite Transmitters) ಅಳವಡಿಸಲಾಗಿದೆ.
- ವಿಶೇಷ ನಾಮಕರಣ: ಭಾರತದ ಖ್ಯಾತ ಪಕ್ಷಿ ತಜ್ಞರ ನೆನಪಿನಲ್ಲಿ ಈ ಯೋಜನೆಯಡಿ ಬಿಡುಗಡೆ ಮಾಡಲಾದ ಎರಡು ಗಂಡು ಪಕ್ಷಿಗಳಿಗೆ 'ಎಲ್‌ಕೆ' (LK) ಮತ್ತು 'ಆರ್‌ಎಸ್‌ಡಿ' (RSD) ಎಂದು ಹೆಸರಿಡಲಾಗಿದೆ.
ಜೂನ್ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ