➤ ಇದು ಭಾರತದಲ್ಲಿ ಮೆಟಾ ಕಂಪನಿಯು ತನ್ನ ಅಗತ್ಯಕ್ಕೆ ತಕ್ಕಂತೆ ಪ್ರತ್ಯೇಕವಾಗಿ ನಿರ್ಮಿಸಿಕೊಳ್ಳುತ್ತಿರುವ ಮೊದಲ 'ಬಿಲ್ಟ್-ಟು-ಸೂಟ್' (Built-to-suit) ಡೇಟಾ ಸೆಂಟರ್ ಆಗಿದೆ. ಈ ಜಾಗತಿಕ ಒಪ್ಪಂದವು ಭಾರತವನ್ನು ಜಗತ್ತಿನ ಹೈಪರ್‌ಸ್ಕೇಲ್ AI ಕಂಪ್ಯೂಟಿಂಗ್‌ನ ಪ್ರಮುಖ ಕೇಂದ್ರವನ್ನಾಗಿ ಬದಲಾಯಿಸಲಿದೆ.
➤ ಗುಜರಾತ್‌ನ ಜಾಂನಗರದಲ್ಲಿ ರಿಲಯನ್ಸ್ ಸಂಸ್ಥೆಯು 2 ವರ್ಷಗಳಲ್ಲಿ ನಿರ್ಮಿಸಲಿರುವ 168 ಮೆಗಾವ್ಯಾಟ್ ಸಾಮರ್ಥ್ಯದ ದೇಶದ ಮೊದಲ ಬೃಹತ್ AI ಡೇಟಾ ಸೆಂಟರ್ ಅನ್ನು ಮೆಟಾ ಸಂಸ್ಥೆಯು ದೀರ್ಘಾವಧಿ ಬಾಡಿಗೆಗೆ ಪಡೆಯಲಿದ್ದು, ಇದು ಸಮುದ್ರದ ನೀರು ಮತ್ತು ನವೀಕರಿಸಬಹುದಾದ ಇಂಧನ ಬಳಸುವ ಸಂಪೂರ್ಣ ಪರಿಸರ ಸ್ನೇಹಿ ಯೋಜನೆಯಾಗಿದೆ.
➤ ಮೆಟಾ ಸಂಸ್ಥೆಗೆ ಈ ಡೇಟಾ ಸೆಂಟರ್: ಭಾರತವು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಬಳಕೆದಾರರ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಕನಸಿನ 'ಪರ್ಸನಲ್ ಸೂಪರ್‌ಇಂಟೆಲಿಜೆನ್ಸ್' (Personal Superintelligence) ಮತ್ತು ಮೆಟಾ AI ತಂತ್ರಜ್ಞಾನದ ಸರ್ವರ್‌ಗಳ ವೇಗವನ್ನು ಭಾರತದಲ್ಲೇ ಹೆಚ್ಚಿಸಲು ಇದು ಸಹಕಾರಿಯಾಗಲಿದೆ.
➤ ಇದಕ್ಕಾಗಿ ಮೆಟಾ ಸಂಸ್ಥೆಯು ಕ್ಲೀನ್‌ಮ್ಯಾಕ್ಸ್ (CleanMax) ಮತ್ತು ಫೋರ್ತ್ ಪಾರ್ಟ್ನರ್ ಎನರ್ಜಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ರಾಜಸ್ಥಾನ, ಕರ್ನಾಟಕ, ತಮಿಳುನಾಡು ಹಾಗೂ ಮಹಾರಾಷ್ಟ್ರಗಳಲ್ಲಿ ಸುಮಾರು 1 ಗಿಗಾವ್ಯಾಟ್ (GW) ಹಸಿರು ಇಂಧನ ಉತ್ಪಾದನೆಗೆ ಹೂಡಿಕೆ ಮಾಡಿದೆ. ಈ ಸಂಪೂರ್ಣ ವೆಚ್ಚವನ್ನು ಮೆಟಾ ಸಂಸ್ಥೆಯು ಭರಿಸಲಿದೆ.
➤ ರಿಲಯನ್ಸ್-ಮೆಟಾ ಹಳೆಯ ಸಾರಥ್ಯ:
- 2020: ಮೆಟಾ ಸಂಸ್ಥೆಯಿಂದ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 5.7 ಬಿಲಿಯನ್ ಡಾಲರ್ ಹೂಡಿಕೆ.
- 2025: ₹855 ಕೋಟಿ ವೆಚ್ಚದ ಜಂಟಿ ಉದ್ಯಮ (Joint Venture) ಸ್ಥಾಪನೆ.
- 2026: ಜಾಂನಗರದ 168 MW AI ಡೇಟಾ ಸೆಂಟರ್ ಒಪ್ಪಂದ.
ಯಾವುದೇ ಉದ್ಯೋಗದ ಅಪ್ಡೇಟ್ ಮಿಸ್ ಮಾಡಿಕೊಳ್ಳಬೇಡಿ; ಕ್ಷಣಕ್ಷಣದ ಮಾಹಿತಿಗಾಗಿ 'KPSCVaani' ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.