➤ ವಿಸರ್ಜನೆಗೆ (Winding-Up) ಪ್ರಮುಖ ಕಾರಣ:
- ನಿಯಂತ್ರಕ ನಿಯಮಗಳ ಉಲ್ಲಂಘನೆ: ಬ್ಯಾಂಕಿಂಗ್ ನಿಯಮಗಳು ಹಾಗೂ ಗ್ರಾಹಕರ ಪರಿಶೀಲನಾ ವಿಧಾನಗಳಲ್ಲಿ (KYC) ತೀವ್ರ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಆರ್‌ಬಿಐ ಈ ಹಿಂದೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಬ್ಯಾಂಕಿಂಗ್ ಪರವಾನಗಿಯನ್ನು (Licence) ರದ್ದುಗೊಳಿಸಿತ್ತು.
- ದೆಹಲಿ ಹೈಕೋರ್ಟ್ ಒಪ್ಪಿಗೆ: ಬ್ಯಾಂಕ್ ಅನ್ನು ವಿಸರ್ಜಿಸಲು ಆರ್‌ಬಿಐ ಸಲ್ಲಿಸಿದ್ದ ಅರ್ಜಿಗೆ ದೆಹಲಿ ಹೈಕೋರ್ಟ್ ಮಾನ್ಯತೆ ನೀಡಿದ್ದು, ಕಾನೂನಾತ್ಮಕವಾಗಿ ಬ್ಯಾಂಕ್ ಮುಚ್ಚುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
- ಆಸ್ತಿ ಮತ್ತು ಹೊಣೆಗಾರಿಕೆಗಳ ನಿರ್ವಹಣೆ: ಬ್ಯಾಂಕ್‌ನ ಆಸ್ತಿಗಳನ್ನು ಕ್ರೋಢೀಕರಿಸಿ, ಸಾಲ ಹಾಗೂ ಹೊಣೆಗಾರಿಕೆಗಳನ್ನು ತೀರಿಸುವುದು.
- ಹಣ ಪಾವತಿ ಭರವಸೆ: ಠೇವಣಿದಾರರಿಗೆ ಮತ್ತು ಸಂಯೋಜಿತ ಸಂಸ್ಥೆಗಳಿಗೆ ದೊರೆಯಬೇಕಾದ ಹಣವನ್ನು ಕಾನೂನುಬದ್ಧವಾಗಿ ವಿತರಿಸುವುದು.
- ಕಾನೂನು ಚೌಕಟ್ಟು: ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 ಮತ್ತು ಕಂಪನಿಗಳ ಕಾಯ್ದೆ, 2013 ರ ಅಡಿಯಲ್ಲಿ ನಿಯಮಗಳ ಪ್ರಕಾರ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು.