* ಭಾರತೀಯ ರಿಸರ್ವ್ ಬ್ಯಾಂಕ್ ನ ಡೆಪ್ಯುಟಿ ಗವರ್ನರ್ ಎಂ ರಾಜೇಶ್ವರ್ ರಾವ್ ಅವರ ಸೇವಾ ಅವಧಿಯನ್ನು ಒಂದು ವರ್ಷ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
* ಅಕ್ಟೋಬರ್ 9, 2024 ರಿಂದ ಜಾರಿಗೆ ಬರುವಂತೆ ರಾವ್ ಅವರನ್ನು ಒಂದು ವರ್ಷದ ಅವಧಿಗೆ ಮರು ನೇಮಕ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಪ್ರಧಾನಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿ ಅಧಿಸೂಚನೆಯಲ್ಲಿ ತಿಳಿಸಿದೆ.
* ರಾವ್ ಅವರ ಎರಡನೇ ಒಂದು ವರ್ಷದ ವಿಸ್ತರಣೆ ಇದಾಗಿದೆ. ಈ ಹಿಂದೆ, RBI ನ ಡೆಪ್ಯುಟಿ ಗವರ್ನರ್ ಆಗಿ ಅವರ ಅಧಿಕಾರಾವಧಿಯನ್ನು ಸರ್ಕಾರವು ಅಕ್ಟೋಬರ್ 9, 2023 ರಿಂದ ಜಾರಿಗೆ ಬರುವಂತೆ ಒಂದು ವರ್ಷ ವಿಸ್ತರಿಸಿತ್ತು.
* ರಾವ್ ಅವರು ಅಕ್ಟೋಬರ್ 2020ರಲ್ಲಿ ಮೂರು ವರ್ಷಗಳ ಅವಧಿಗೆ RBIನ ಡೆಪ್ಯುಟಿ ಗವರ್ನರ್ ಆಗಿ ನೇಮಕಗೊಂಡಿದ್ದರು.
* ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಹಾಗೂ ಕೊಚ್ಚಿ ವಿಶ್ವವಿದ್ಯಾಲಯದಿಂದ ಎಂಬಿಎ ಪೂರೈಸಿರುವ ರಾವ್ ಅವರು 1984ರಲ್ಲಿ ಕೇಂದ್ರೀಯ ಬ್ಯಾಂಕ್ ಗೆ ನೇಮಕಗೊಂಡಿದ್ದರು.
RBI ಡೆಪ್ಯುಟಿ ಗವರ್ನರ್ ರಾಜೇಶ್ವರ್ ರಾವ್ ಅವರ ಅಧಿಕಾರಾವಧಿ ವಿಸ್ತರಿಸಿದ ಕೇಂದ್ರ ಸರ್ಕಾರ
Published by Jyoti Angadi
07 ಅಕ್ಟೋಬರ್ 2024