➤ CBDT (Central Board of Direct Taxes) ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆದಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಅತ್ಯುನ್ನತ ನೇರ ತೆರಿಗೆ ಆಡಳಿತ ಮಂಡಳಿಯಾಗಿದೆ. ಇದು ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಸೇರಿದಂತೆ ನೇರ ತೆರಿಗೆಗಳ ನೀತಿ ರೂಪಿಸುವುದು, ತೆರಿಗೆ ಆಡಳಿತ ಸುಧಾರಣೆ ಹಾಗೂ ಆದಾಯ ತೆರಿಗೆ ಇಲಾಖೆಯ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುತ್ತದೆ.
➤ ರವಿ ಅಗರವಾಲ್ ಕುರಿತು:
- 1988ರ ಬ್ಯಾಚ್‌ನ ಭಾರತೀಯ ಆದಾಯ ಸೇವೆ (IRS) ಅಧಿಕಾರಿ.
- 2024ರಿಂದ CBDT ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
- ತೆರಿಗೆ ವ್ಯವಸ್ಥೆಯ ಡಿಜಿಟಲೀಕರಣ, ತೆರಿಗೆದಾರರಿಗೆ ಸುಲಭ ಸೇವೆ, ಪಾರದರ್ಶಕ ಆಡಳಿತ ಹಾಗೂ ತೆರಿಗೆ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ದಿಕ್ಕಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಜೂನ್ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ