➤ ಫಿಲಿಪ್ಪಿನ್ಸ್‌ನ ಸಿಬು (Cebu) ನಗರದಲ್ಲಿ ಅಕ್ಟೋಬರ್ 28 ರಿಂದ 29 ರವರೆಗೆ ನಡೆಯಲಿರುವ 13ನೇ ಆಸಿಯಾನ್ ರಕ್ಷಣಾ ಸಚಿವರ ಸಭೆ (ADMM-Plus) ಯಲ್ಲಿ ಭಾಗವಹಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತೆರಳಿದ್ದಾರೆ. ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ, ಭದ್ರತೆ ಹಾಗೂ ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಪ್ರವಾಸ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ.
➤ ದ್ವಿಪಕ್ಷೀಯ ಮಾತುಕತೆ: ಭೇಟಿಯ ವೇಳೆ ಚೀನಾ, ರಷ್ಯಾ, ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳ ರಕ್ಷಣಾ ಸಚಿವರೊಂದಿಗೆ ರಾಜನಾಥ್ ಸಿಂಗ್ ಅವರು ಸಮಾಲೋಚನೆ ನಡೆಸಲಿದ್ದಾರೆ.
➤ ಸಾಮಾಜಿಕ ಜಾಲತಾಣ 'X' ನಲ್ಲಿ ರಾಜನಾಥ್ ಸಿಂಗ್ ಸಂದೇಶ: "ರಕ್ಷಣೆ ಮತ್ತು ಕಾರ್ಯತಂತ್ರದ ಚರ್ಚೆಗಳಿಗೆ ಆಸಿಯಾನ್ ಪ್ರಮುಖ ವೇದಿಕೆಯಾಗಿದೆ. ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸರ್ವತೋಮುಖ ಬೆಳವಣಿಗೆಗೆ ಭಾರತದ 'ಆಕ್ಟ್ ಈಸ್ಟ್' (Act East) ನೀತಿಯಡಿ ಬದ್ಧರಾಗಿದ್ದೇವೆ."

➤ ಆಸಿಯಾನ್ (ASEAN) ಒಕ್ಕೂಟ:
- ಆಸಿಯಾನ್ (Association of Southeast Asian Nations) 10 ಆಗ್ನೇಯ ಏಷ್ಯಾದ ರಾಷ್ಟ್ರಗಳ ಒಕ್ಕೂಟವಾಗಿದೆ.
- ಭಾರತವು 1992 ರಿಂದ ಆಸಿಯಾನ್‌ನ ಸಂವಾದ ಪಾಲುದಾರ (Dialogue Partner) ದೇಶವಾಗಿದೆ.
➤ ADMM-Plus :
- ADMM-Plus (ASEAN Defence Ministers' Meeting-Plus) ಎಂಬುದು ಆಸಿಯಾನ್ ಸದಸ್ಯ ರಾಷ್ಟ್ರಗಳು ಹಾಗೂ ಅದರ 8 ಸಂವಾದ ಪಾಲುದಾರ ದೇಶಗಳ (ಭಾರತ, ಆಸ್ಟ್ರೇಲಿಯಾ, ಚೀನಾ, ಜಪಾನ್, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ರಷ್ಯಾ ಮತ್ತು ಅಮೆರಿಕ) ರಕ್ಷಣಾ ಸಚಿವರ ವೇದಿಕೆಯಾಗಿದೆ.   
- ಇದು 2010 ರಿಂದ ಪ್ರಾದೇಶಿಕ ಭದ್ರತೆ ಮತ್ತು ರಕ್ಷಣಾ ಸಹಕಾರಕ್ಕಾಗಿ ಕಾರ್ಯನಿರ್ವಹಿಸುತ್ತಿದೆ.
➤  ಉಗ್ರ ನಿಗ್ರಹ ಕಾರ್ಯಪಡೆ (EWG on Counter-Terrorism):   
  - ಪ್ರಸ್ತುತ ಭಾರತ ಮತ್ತು ಮಲೇಷ್ಯಾ ದೇಶಗಳು ಉಗ್ರ ನಿಗ್ರಹ ಕಾರ್ಯಪಡೆಯ ಸಹ-ಅಧ್ಯಕ್ಷತೆಯನ್ನು (Co-Chair) ವಹಿಸಿಕೊಂಡಿವೆ.