➤ ಯೋಜನೆಯ ಮುಖ್ಯ ವಿವರಗಳು:
- ಹೂಡಿಕೆ ಮತ್ತು ಜಾಗ: ತೆಲಂಗಾಣದ ಹೈದರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಹಾರ್ಡ್‌ವೇರ್ ಪಾರ್ಕ್ (Hardware Park) ನಲ್ಲಿ 50 ಎಕರೆ ವಿಸ್ತೀರ್ಣದಲ್ಲಿ ಈ ಘಟಕ ನಿರ್ಮಾಣವಾಗಲಿದೆ.
- ಉತ್ಪಾದನಾ ಸಾಮರ್ಥ್ಯ: ಈ ಸಂಯೋಜಿತ (Integrated) ಘಟಕವು ವಾರ್ಷಿಕವಾಗಿ ಸುಮಾರು 5,000 ಟನ್ ಸೂಪರ್ ಅಲಾಲಿಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.
- ವಾಣಿಜ್ಯಿಕ ಉತ್ಪಾದನೆ ಪ್ರಾರಂಭ: ಈ ಪ್ಲಾಂಟ್‌ನ ವಾಣಿಜ್ಯಿಕ ಉತ್ಪಾದನೆಯು ಜನವರಿ 2028 ರಿಂದ ಆರಂಭಗೊಳ್ಳುವ ಗುರಿ ಹೊಂದಲಾಗಿದೆ.
- ಯೋಜನೆಯ ನೇತೃತ್ವ: 'ಮಿಶ್ರಾ ಧಾತು ನಿಗಮ್ ಲಿಮಿಟೆಡ್' (MIDHANI) ಸಂಸ್ಥೆಯ ಮಾಜಿ ಸಿಎಂಡಿ ಡಾ. ಎಸ್. ಕೆ. ಝಾ ಅವರು ಈ ಮಹತ್ವಾಕಾಂಕ್ಷೆಯ ಯೋಜನೆಯ ನೇತೃತ್ವ ವಹಿಸಲಿದ್ದಾರೆ.
- ಬಳಕೆ: ನಿಕಲ್ ಆಧಾರಿತ (Nickel-based) ಈ ಸೂಪರ್ ಅಲಾಲಿಗಳನ್ನು ವಿಮಾನಗಳ ಜೆಟ್ ಎಂಜಿನ್‌ಗಳು, ಬಾಹ್ಯಾಕಾಶ ನೌಕೆಗಳು, ರಕ್ಷಣಾ ಉಪಕರಣಗಳು, ಗ್ಯಾಸ್ ಟರ್ಬೈನ್‌ಗಳು, ಪರಮಾಣು ಶಕ್ತಿ ಘಟಕಗಳು ಮತ್ತು ಹೈಡ್ರೋಜನ್ ತಂತ್ರಜ್ಞಾನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
- ಆಮದು ನಿರ್ಬಂಧ: ಪ್ರಸ್ತುತ ಭಾರತವು ನಿಕಲ್ ಸೂಪರ್ ಅಲಾಲಿಗಳಿಗಾಗಿ ವಿದೇಶಿ ಆಮದಿನ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿದೆ. ಈ ಘಟಕ ಸ್ಥಾಪನೆಯಿಂದ ದೇಶೀಯವಾಗಿ ಉನ್ನತ ಮಟ್ಟದ ಲೋಹಗಳು ಲಭ್ಯವಾಗಲಿದ್ದು, ಆಮದು ಪ್ರಮಾಣ ಗಣನೀಯವಾಗಿ ತಗ್ಗಲಿದೆ.
ಪ್ರತಿದಿನದ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ