* ರಾಷ್ಟ್ರಪತಿ ಭವನದಲ್ಲಿನ ʼದರ್ಬಾರ್ ಹಾಲ್’ ಅನ್ನು 'ಗಣತಂತ್ರ ಮಂಟಪ' ಎಂದು ಹಾಗೂ ‘ಅಶೋಕ ಹಾಲ್’ ಅನ್ನು 'ಅಶೋಕ ಮಂಟಪ' ಎಂದು ಜುಲೈ 25 ರಂದು ಮರುನಾಮಕರಣ ಮಾಡಲಾಗಿದೆ.
* ರಾಷ್ಟ್ರಪತಿ ಭವನದಲ್ಲಿ ಭಾರತೀಯ ಸಂಸ್ಕೃತಿಯ ಸಾಂಸ್ಕೃತಿಕ ಮೌಲ್ಯಗಳು ಹಾಗೂ ನೈತಿಕತೆಯನ್ನು ಪಸರಿಸುವ ನಿರಂತರ ವಾತಾವರಣವನ್ನು ನಿರ್ಮಿಸುವ ಪ್ರಯತ್ನ ಇದಾಗಿದೆ ಎಂದು ರಾಷ್ಟ್ರಪತಿ ಭವನದ ತಿಳಿಸಿದೆ.
* ‘ಗಣತಂತ್ರ’ ಪರಿಕಲ್ಪನೆಯು ಪ್ರಾಚೀನ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿದೆ. ‘ಗಣತಂತ್ರ ಮಂಟಪ’ ಈ ಸ್ಥಳಕ್ಕೆ ಸೂಕ್ತ ಹೆಸರಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
* “ಅಶೋಕ” ಎಂಬ ಪದವು ‘ಎಲ್ಲಾ ದುಃಖಗಳಿಂದ ಮುಕ್ತ’ ಅಥವಾ ‘ಯಾವುದೇ ದುಃಖದಿಂದ ದೂರವಿರುವ’ ವ್ಯಕ್ತಿಯನ್ನು ಸೂಚಿಸುತ್ತದೆ” ಎಂದು ಹೇಳಿಕೆ ತಿಳಿಸಿದೆ. ಅಲ್ಲದೆ ‘ಅಶೋಕ’ ಚಕ್ರವರ್ತಿ ಅಶೋಕನನ್ನು ಸೂಚಿಸುತ್ತದೆ, ಇದು ಏಕತೆ ಮತ್ತು ಶಾಂತಿಯುತ ಸಹಬಾಳ್ವೆಯ ಸಂಕೇತವಾಗಿದೆ ಎಂದು ತಿಳಿಸಿದೆ.
* ದರ್ಬಾರ್ ಹಾಲ್ ಅನ್ನು ಹಿಂದೆ ಸಿಂಹಾಸನ ಕೊಠಡಿ ಎಂದು ಕರೆಯಲಾಗುತ್ತಿತ್ತು, ಅಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರ ನೇತೃತ್ವದ ಸ್ವತಂತ್ರ ಭಾರತದ ಮೊದಲ ಸರ್ಕಾರವು ಆಗಸ್ಟ್ 15, 1947 ರಂದು ಪ್ರಮಾಣ ವಚನ ಸ್ವೀಕರಿಸಿತು.
ರಾಷ್ಟ್ರಪತಿ ಭವನದ ʼದರ್ಬಾರ್ ಹಾಲ್’ ಮತ್ತು ‘ಅಶೋಕ ಹಾಲ್’ಗೆ ಮರುನಾಮಕರಣ
Published by Bhagya R K
26 ಜುಲೈ 2024