* ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಬಹುಚರ್ಚಿತ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಗೆ ಅಂಕಿತ ಹಾಕಿದ್ದು, ಈಗ ಅದು ಕಾನೂನಾಗಿದೆ. ಇದರಿಂದ 2011ರಿಂದ ಜಾರಿಯಲ್ಲಿದ್ದ ಕ್ರೀಡಾ ಸಂಹಿತೆಯನ್ನು ಬದಲಿಸಿ ಹೊಸ ಕ್ರೀಡಾ ಆಡಳಿತ ಕಾಯ್ದೆ ಜಾರಿಗೆ ಬಂದಿದೆ.
* ಕಾಯ್ದೆಯಡಿ ರಾಷ್ಟ್ರೀಯ ಕ್ರೀಡಾ ಮಂಡಳಿ (NSB), ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ (NST) ಮತ್ತು ಕ್ರೀಡಾ ಚುನಾವಣಾ ಪ್ಯಾನೆಲ್ ಸ್ಥಾಪನೆಗೊಳ್ಳಲಿದೆ.
- NSB: ಎಲ್ಲಾ ಕ್ರೀಡಾ ಫೆಡರೇಷನ್‌ಗಳ ಮೇಲ್ವಿಚಾರಣೆ
- NST: ಆಯ್ಕೆ, ಚುನಾವಣಾ ವಿವಾದ, ಹಣಕಾಸು-ಆಡಳಿತ ದುರುಪಯೋಗ ವಿಚಾರಣೆ (ಸುಪ್ರೀಂ ಕೋರ್ಟ್ ಹೊರತುಪಡಿಸಿ ಮೇಲ್ಮನವಿ ಇಲ್ಲ)
* ಹೊಸ ಕಾಯ್ದೆ ಪ್ರಕಾರ ಬಿಸಿಸಿಐ NSB ಅಡಿಯಲ್ಲಿ ಬರುತ್ತದೆ. ಆದರೆ ಸರ್ಕಾರದಿಂದ ನಿಧಿ ಪಡೆಯದ ಕಾರಣ ಅದು ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರದಿಂದ ನಿಧಿ ಪಡೆಯುವ ಇತರ ಫೆಡರೇಷನ್‌ಗಳಿಗೆ ಮಾತ್ರ ಆರ್‌ಟಿಐ ಅನ್ವಯಿಸುತ್ತದೆ.
* ಹಿಂದಿನ ನಿಯಮ ಪ್ರಕಾರ 2 ಅವಧಿಗೆ ಸದಸ್ಯರಾಗಿದ್ದವರಿಗೆ ಮಾತ್ರ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ ಸ್ಥಾನಗಳಿಗೆ ಸ್ಪರ್ಧಿಸಲು ಅವಕಾಶವಿತ್ತು. ಹೊಸ ಕಾಯ್ದೆಯಲ್ಲಿ ಸಡಿಲಿಕೆ ನೀಡಿ, ಒಮ್ಮೆ ಸದಸ್ಯರಾದರೂ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಗೆ ರಾಷ್ಟ್ರಪತಿಯ ಅಂಕಿತ
Published by Jyoti Angadi
21 ಆಗಸ್ಟ್ 2025