* ಭಾರತ ಸರ್ಕಾರವು 2021ರಲ್ಲಿ "ಸಿಹಿ ಕ್ರಾಂತಿ" (Sweet Revolution) ಯ ಭಾಗವಾಗಿ ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನುತುಪ್ಪ ಮಿಷನ್ (NBHM) ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯ ಉದ್ದೇಶ, ದೇಶದಲ್ಲಿ ಜೇನುಸಾಕಣೆಯ ಆಧುನಿಕೀಕರಣ ಮತ್ತು ಜೇನುತುಪ್ಪ ಉತ್ಪಾದನೆಯನ್ನು ಗುಣಮಟ್ಟದ ಮಟ್ಟದಲ್ಲಿಗೆ ಏರಿಸುವುದಾಗಿದೆ.
* ಈ ಮಿಷನ್‌ನ್ನು ರಾಷ್ಟ್ರೀಯ ಜೇನುನೊಣ ಮಂಡಳಿ (National Bee Board – NNB) ಕಾರ್ಯಗತಗೊಳಿಸುತ್ತಿದ್ದು, ಜೇನುಸಾಕಣೆಗಾರರಿಗೆ ಆರ್ಥಿಕ ಸಹಾಯ, ತರಬೇತಿ ಹಾಗೂ ಯಂತ್ರೋಪಕರಣಗಳ ಸೌಲಭ್ಯ ಒದಗಿಸುತ್ತದೆ.
* ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನುತುಪ್ಪ ಮಿಷನ್ (NBHM) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ದೇಶದಲ್ಲಿ ವೈಜ್ಞಾನಿಕ ಜೇನುಸಾಕಣೆಯ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ 'ಸಿಹಿ ಕ್ರಾಂತಿ'ಯನ್ನು (Sweet Revolution) ತರುವ ಗುರಿಯನ್ನು ಹೊಂದಿದೆ. ಇದು ಪ್ರಧಾನಮಂತ್ರಿಗಳ 'ಆತ್ಮನಿರ್ಭರ ಭಾರತ ಅಭಿಯಾನ'ದ ಒಂದು ಭಾಗವಾಗಿದೆ.
* ಈ ಮಿಷನ್‌ನಡಿ Blockchain, IT tools ಬಳಸಿ ಜೇನುತುಪ್ಪದ ನಿಖರ ಮೂಲ, ಗುಣಮಟ್ಟ ಮತ್ತು ಪತ್ತೆಹಚ್ಚುವಿಕೆ ವ್ಯವಸ್ಥೆ (Traceability system) ಅಳವಡಿಸಲಾಗುತ್ತದೆ. ಇದರಿಂದ ವಂಚನೆ, ಮಿಶ್ರಣ ಮತ್ತು ದುರುಪಯೋಗವನ್ನು ತಡೆಯಲಾಗುತ್ತದೆ.
* ಭಾರತವು ಜೇನುತುಪ್ಪ ರಫ್ತುದಾರ ರಾಷ್ಟ್ರಗಳ ಪಟ್ಟಿಯಲ್ಲಿ 2020 ರಲ್ಲಿ ಇದ್ದ 9ನೇ ಸ್ಥಾನದಿಂದ ಈಗ ವಿಶ್ವದ 2ನೇ ಅತಿದೊಡ್ಡ ರಫ್ತುದಾರನಾಗಿ ಹೊರಹೊಮ್ಮಿದೆ. ಜೇನುತುಪ್ಪ ಮತ್ತು ಇತರ ಜೇನು ಉತ್ಪನ್ನಗಳ ಮೂಲದ ಆನ್‌ಲೈನ್ ನೋಂದಣಿ ಮತ್ತು ಪತ್ತೆಹಚ್ಚುವಿಕೆ (Traceability) ಗಾಗಿ 'ಮಧು ಕ್ರಾಂತಿ ಪೋರ್ಟಲ್' ಅನ್ನು ಪ್ರಾರಂಭಿಸಲಾಗಿದೆ.
NBHM ಒಂದು ಪರಿವರ್ತಕ ಯೋಜನೆ. ಇದು ಜೇನುಸಾಕಣೆಗಾರರಿಗೆ ಲಾಭ, ಪರಿಸರಕ್ಕೆ ಸಮತೋಲನ, ಕೃಷಿಗೆ ಉತ್ಪಾದಕತೆ ಹಾಗೂ ದೇಶಕ್ಕೆ ಆರ್ಥಿಕ ವೃದ್ಧಿಯನ್ನು ಒಟ್ಟಾಗಿ ನೀಡುವ ಬಹುಮುಖ ಮಿಷನ್
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.