* ರಾಜ್ಯಸಭೆಯು ಅಂಚೆ ಕಚೇರಿ ವಿಧೇಯಕ-2023 ಅನ್ನು ಅಂಗೀಕರಿಸಿದ್ದು, ಈ ವಿಧೇಯಕವು 125 ವರ್ಷಗಳಷ್ಟು ಹಳೆಯದಾದ ಭಾರತೀಯ ಅಂಚೆ ಕಚೇರಿ- ಕಾಯಿದೆಯನ್ನು ರದ್ದುಗೊಳಿಸುವ, ದೇಶದಲ್ಲಿನ ಅಂಚೆ ಕಚೇರಿಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಒಗ್ಗೂಡಿಸಿ, ತಿದ್ದುಪಡಿ ಮಾಡುವ ಉದ್ದೇಶ ಹೊಂದಿದೆ.
* 'ದೇಶದ ಭದ್ರತೆಯ ಹಿತದೃಷ್ಟಿಯಿಂದ, ವಿದೇಶಗಳ ಜೊತೆಗಿನ ಸ್ನೇಹಸಂಬಂಧದ ದೃಷ್ಟಿಯಿಂದ, ಸಾರ್ವಜನಿಕ ಸುವ್ಯವಸ್ಥೆ, ತುರ್ತು ಸಂದರ್ಭ ಅಥವಾ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ, ಯಾವುದೇ ಕಾನೂನಿನ ಉಲ್ಲಂಘನೆಯಾದ ಸಂದರ್ಭದಲ್ಲಿ ಕೇಂದ್ರ ಸರಕಾರವು ಅಧಿಸೂಚನೆಯ ಮೂಲಕ ಯಾವುದೇ ಅಧಿಕಾರಿಗೆ ಯಾವುದೇ ವಸ್ತುವನ್ನು ಪರೀಕ್ಷಿಸುವ, ಅದನ್ನು ತೆರೆದು ನೋಡುವ ಅಥವಾ ಅದನ್ನು ವಶಕ್ಕೆ ತೆಗೆದುಕೊಳ್ಳುವ ಅಧಿಕಾರ ನೀಡಬಹುದು' ಎಂದು ವಿಧೇಯಕದಲ್ಲಿ ಹೇಳಲಾಗಿದೆ.
ರಾಜ್ಯಸಭೆಯಿಂದ ಅಂಚೆ ಕಚೇರಿ ವಿಧೇಯಕ ಅಂಗೀಕಾರ
Published by Tajabi Pathan
05 ಡಿಸೆಂಬರ್ 2023