* ಸದ್ಯವೇ ನಡೆಯಲಿರುವ ಲೋಕಸಭಾ ಚುನಾವಣೆಗೆ ಮತದಾನ ಮಾಡಲು 5.37 ಕೋಟಿ ಮತದಾರರು ಅರ್ಹರಾಗಿದ್ದು, ಮಹಿಳಾ ಮತದಾರರ ಸಂಖ್ಯೆಯೂ ಏರಿಕೆಯಾಗಿದೆ. 
* ಕರ್ನಾಟಕ ಚುನಾವಣಾ ಆಯೋಗವು ಜನವರಿ 22 ರಂದು (ಸೋಮವಾರ) ರಾಜ್ಯದ 224 ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ಪ್ರಕಟ ಮಾಡಿದ್ದು, ಒಟ್ಟು ಮತದಾರರ ಸಂಖ್ಯೆ 5.37 ಕೋಟಿ ಗೆ ಏರಿಕೆಯಾಗಿದೆ ಎಂದು ತಿಳಿಸಿದೆ.
* ರಾಜ್ಯದ ಚುನಾವಣಾ ಅಂತಿಮ‌ ಪಟ್ಟಿಯಲ್ಲಿ ಈಗ 5,37,85,815 ಮತದಾರರು ಇದ್ದಾರೆ. ಇದರಲ್ಲಿ 2,69,33,750 ಪುರುಷರು, 2,68,47,145 ಮಹಿಳೆಯರು ಮತ್ತು 4,896 ಇತರೆ ಮತದಾರರು ಮತದಾನದ ಗುರುತಿನಿ ಚೀಟಿ ಹೊಂದಿದ್ದಾರೆ. 
* 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು ಅಂದರೆ 7,17,201 ಮತದಾರರನ್ನು ಹೊಂದಿದೆ.
* ರಾಜ್ಯದಲ್ಲಿರುವ ಒಟ್ಟು ಮತದಾರರ ವಿವರ :
ಒಟ್ಟು ಮತದಾರರ ಸಂಖ್ಯೆ: 5,37,85,815
ಪುರುಷರ ಸಂಖ್ಯೆ: 2,69,33,750
ಮಹಿಳೆಯರ ಸಂಖ್ಯೆ: 2,68,47,145
ಇತರೆ: 4,920
ಸೇವಾ ಮತದಾರರ ಸಂಖ್ಯೆ: 46,501
ಯುವ ಮತದಾರರ ಸಂಖ್ಯೆ: 3,88,527
ವಿದೇಶದಲ್ಲಿರುವ ಮತದಾರರ ಸಂಖ್ಯೆ: 3,164
80 ವರ್ಷ ದಾಟಿರುವ ಮತದಾರರ ಸಂಖ್ಯೆ: 12,71,862
ಶತಾಯುಷಿ ಅಂದರೆ 100ಕ್ಕೂ ಹೆಚ್ಚು ವರ್ಷ ತುಂಬಿರುವವರ ಸಂಖ್ಯೆ: 17,937
ವಿಕಲ ಚೇತನ ಮತದಾರರ ಸಂಖ್ಯೆ: 5,62,890
ಮತದಾನ ಕೇಂದ್ರಗಳ ಸಂಖ್ಯೆ: 58,834