* ಆಂತರಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆಡಳಿತಾರೂಢ ಲಿಬರಲ್ ಪಕ್ಷದ ನಾಯಕನ ಸ್ಥಾನಕ್ಕೆ ಮತ್ತು ಕೆನಡಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
* ಪಕ್ಷವು ಬದಲಿ ನಾಯಕನ ಆಯ್ಕೆ ಮಾಡುವವರೆಗೂ ಹುದ್ದೆಯಲ್ಲಿ ಮುಂದುವರಿಯುವುದಾಗಿ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.
* ಕೆನಡಾದಲ್ಲಿ ಹಂಗಾಮಿ ಪ್ರಧಾನಿ ಆಯ್ಕೆಯಾಗುವವರೆಗೂ ಜಸ್ಟಿನ್ ಟ್ರುಡೊ ಪಿಎಂ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
* 2013ರಿಂದ ಕೆನಡಾದ ಲಿಬರಲ್ ಪಕ್ಷದ ನಾಯಕ ಹಾಗೂ 2015ರಿಂದ ಪ್ರಧಾನಿಯಾಗಿರುವ ಟ್ರುಡೋ "...ಪಕ್ಷವು ತನ್ನ ಮುಂದಿನ ನಾಯಕನನ್ನು ಆಯ್ಕೆ ಮಾಡಿದ ನಂತರ ನಾನು ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿದ್ದೇನೆ. ಕಳೆದ ರಾತ್ರಿ ನಾನು ಲಿಬರಲ್ ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ಪ್ರಕ್ರಿಯೆ ಆರಂಭಿಸುವಂತೆ ಕೇಳಿಕೊಂಡಿದ್ದೇನೆ." ಎಂದು ಪ್ರಧಾನಿ ಹೇಳಿದ್ದಾರೆ.
* ಕಳೆದ ಒಂದು ತಿಂಗಳಿನಿಂದ ಟ್ರುಡೊ ನೇತೃತ್ವದ ಲಿಬರಲ್ ಪಕ್ಷದ ಸರ್ಕಾರದಲ್ಲಿ ಆಂತರಿಕ ಕಲಹ ಉಂಟಾಗಿದೆ. ಟ್ರುಡೊ ನಾಯಕತ್ವದ ವಿರುದ್ದ ಅವರ ಪಕ್ಷದ ಸಂಸದರೇ ಅಪಸ್ವರ ಎತ್ತಿದ್ದಾರೆ. ಹಣಕಾಸು ಸಚಿವೆ ಕ್ರಿಸ್ಟಿನಾ ಫ್ರಿಲ್ಯಾಂಡ್ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
* ಖಲಿಸ್ತಾನ್ ಪ್ರತ್ಯೇಕವಾದಿಗಳ ವಿಚಾರದಲ್ಲೂ ಟ್ರುಡೊ ನಾಯಕತ್ವ ಮತ್ತು ಭಾರತದ ನಡುವೆ ಸಂಬಂಧ ಹಳಸಿದೆ. ಟ್ರುಡೊ ಸರ್ಕಾರ ಕೆನಡಾದಲ್ಲಿರುವ ಖಲಿಸ್ತಾನಿಗಳ ಪರ ಹೇಳಿಕೆ ನೀಡುತ್ತಿರುವುದನ್ನು ಭಾರತ ಖಂಡಿಸಿದೆ.
ರಾಜೀನಾಮೆ ಘೋಷಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ
Published by Jyoti Angadi
07 ಜನವರಿ 2025