* ಭಾರತದ ಪ್ಯಾರಾ ಜಾವೆಲಿನ್ ಎಸೆತಗಾರ ಸುಮಿತ್ ಆಂಟಿಲ್ ಅವರು ಪ್ಯಾರಾಲಿಂಪಿಕ್ಸ್ 2024 ರ ಎಫ್ 64 ಫೈನಲ್‌ನಲ್ಲಿ 70.59 ಮೀ ಅತ್ಯುತ್ತಮ ಎಸೆತದೊಂದಿಗೆ ಚಿನ್ನದ ಪದಕವನ್ನು ಗೆದ್ದರು.
* ಸುಮಿತ್ ಆಂಟಿಲ್ ಅವರ ಈ ಥ್ರೋ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲೇ (ಎಫ್ 64 ವಿಭಾಗ) ಅತ್ಯುತ್ತಮ ಥ್ರೋ ಆಗಿದೆ.
* ಶ್ರೀಲಂಕಾದ ದುಲಾನ್ ಕೊಡಿತುವಕ್ಕು 67.03 ಮೀಟರ್ ದೂರ ಎಸೆದು ಬೆಳ್ಳಿ ಪದಕ ಗೆದ್ದರೆ, ಮಿಚಲ್ ಬುರಿಯನ್ 64.89 ಮೀಟರ್ ದೂರ ಎಸೆದು ಕಂಚಿನ ಪದಕ ಪಡೆದರು.
* ಭಾರತದ ಪದಕಗಳ ಸಂಖ್ಯೆ ಒಟ್ಟು 14ಕ್ಕೇರಿದೆ. ಇದಲ್ಲದೇ ಭಾರತ ಇದುವರೆಗೆ 3 ಚಿನ್ನ, 5 ಬೆಳ್ಳಿ ಹಾಗೂ 6 ಕಂಚಿನ ಪದಕ ಗೆದ್ದಿದೆ.
ಮಂಗಳವಾರ, 03 ಸೆಪ್ಟೆಂಬರ್ 2024
4:12 ಅಪರಾಹ್ನ
Daily PDF
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024: ಪುರುಷರ ಜಾವೆಲಿನ್ ಎಫ್ 64 ಸ್ಪರ್ಧೆಯಲ್ಲಿ ಸುಮಿತ್ ಆಂಟಿಲ್ ಹೊಸ ಪ್ಯಾರಾಲಿಂಪಿಕ್ ದಾಖಲೆ
Authored by:
Bhagya R K