* 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿ 1 ಬೆಳ್ಳಿ ಮತ್ತು 5 ಕಂಚಿನ ಪದಕ ಸೇರಿದಂತೆ ಒಟ್ಟು 6 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
* ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಗೆ ಹೋಗುತ್ತಿರುವ ಭಾರತೀಯ ತಂಡವು ಈವರೆಗಿನ ಭಾರತದ ಅತಿ ದೊಡ್ಡ ತಂಡವಾಗಿದೆ. ಈ ಬಾರಿ ಭಾರತೀಯ ತಂಡದಲ್ಲಿ 179 ಸದಸ್ಯರಿದ್ದಾರೆ.
* 84 ಅತ್ಲೀಟ್ಗಳು 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. 2021ರಲ್ಲಿ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ 54 ಅತ್ಲೀಟ್ಗಳು 9 ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದಾರೆ.
* ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆ ಇನ್ನೂ ಜೀವಂತವಾಗಿದ್ದು, ಅದೇ ಪ್ಯಾರಿಸ್‌ನಲ್ಲಿ ಆಗಸ್ಟ್ 28 ರಿಂದ ಆರಂಭವಾಗಲಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಅಥ್ಲೀಟ್‌ಗಳು ಚಿನ್ನ ಗೆಲುವ ಭರವಸೆ ಮೂಡಿಸಿದ್ದಾರೆ.
* ಈ ಬಾರಿಯ ಪ್ಯಾರಾಲಿಂಪಿಕ್ಸ್ನಲ್ಲಿ 207 ದೇಶಗಳಿಂದ ಸುಮಾರು 4400 ಅಥ್ಲೀಟ್‌ಗಳು ಭಾಗವಹಿಸಲಿದ್ದು, ವಿವಿದ ಕ್ರೀಡೆಗಳಲ್ಲಿ 549 ಚಿನ್ನದ ಪದಕಗಳನ್ನು ವಿತರಿಸಲಾಗುತ್ತದೆ. ಇದೀಗ ಈ ಕ್ರೀಡಾಕೂಟಕ್ಕೆ ಭಾರತದ ತಂಡವೂ ಕೂಡ ಇಂದು ಪ್ಯಾರಿಸ್ಗೆ ಪ್ರಯಾಣ ಬೆಳೆಸಿದೆ.
ಸೋಮವಾರ, 26 ಆಗಸ್ಟ್ 2024
9:30 ಪೂರ್ವಾಹ್ನ
Daily PDF
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 : ಭಾರತದ ತಂಡದಲ್ಲಿ 179 ಮಂದಿ
Authored by:
Bhagya R K