* ಪ್ಯಾರಿಸ್ ಪ್ಯಾರಾಲಿಂಪಿಕ್ 2024 ರ ಕ್ರೀಡಾಕೂಟದಲ್ಲಿ ಮೊದಲ ಚಿನ್ನದ ಪದಕವನ್ನು ನೆದರ್ಲ್ಯಾಂಡ್ಸ್ ನ ಕ್ಯಾರೊಲಿನ್ ಗ್ರೂಟ್ ಅವರು ಗೆದ್ದಿದ್ದಾರೆ.
* ನೆದರ್ಲೆಂಡ್ಸ್‌ನ ಕ್ಯಾರೋಲಿನ್ ಗ್ರೂಟ್ ಮಹಿಳೆಯರ C4-5 500m ಟೈಮ್ ಟ್ರಯಲ್ ಟ್ರ್ಯಾಕ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಕ್ರೀಡಾಕೂಟದ ಮೊದಲ ಚಿನ್ನದ ಪದಕವನ್ನು ಪಡೆದರು. ಫ್ರೆಂಚ್ ಆಟಗಾರ್ತಿ ಮೇರಿ ಪಟೌಲೆಟ್ ಬೆಳ್ಳಿ ಗೆದ್ದರೆ, ಕೆನಡಾದ ಕೇಟ್ ಓಬ್ರೇನ್ ಕಂಚಿನ ಪದಕ ಪಡೆದುಕೊಂಡರು.
* ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನ ಇತ್ತೀಚಿನ ಆವೃತ್ತಿಯು ಪ್ರಪಂಚದಾದ್ಯಂತದ 4,400 ಕ್ರೀಡಾಪಟುಗಳು 22 ಕ್ರೀಡೆಗಳಲ್ಲಿ 549 ಪದಕ ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ.
* ಮಹಿಳೆಯರ ಟ್ರ್ಯಾಕ್ ಸೈಕ್ಲಿಂಗ್‌ನ 500 ಮೀ. ಟೈಮ್ ಟ್ರಯಲ್ ಸಿ4-5 ವಿಭಾಗದಲ್ಲಿ 35.390 ಸೆಕೆಂಡುಗಳಲ್ಲಿ ಗುರಿ ತಲುಪಿದ ಗ್ರೂಟ್ ಅವರು ಚಿನ್ನದ ಪದಕ ಜಯಿಸಿದ್ದಾರೆ.
* ಫ್ರಾನ್ಸ್‌ನ ಮೇರಿ ಪಟೌಲೆಟ್ ಬೆಳ್ಳಿ ಸಾಧನೆಯ ಮೂಲಕ ಆತಿಥೇಯ ರಾಷ್ಟ್ರದ ಮೊದಲ ಪದಕ ಗೆದ್ದರು. ಕೆನೆಡಾದ ಕೇಟ್ 163 ಒಬ್ರಿಯಾನ್ ಕಂಚಿನ ಪದಕ ಗೆದ್ದರು.
ಶುಕ್ರವಾರ, 30 ಆಗಸ್ಟ್ 2024
3:35 ಅಪರಾಹ್ನ
Daily PDF
ಪ್ಯಾರಿಸ್ ಪ್ಯಾರಾಲಿಂಪಿಕ್ 2024 : ಟ್ರ್ಯಾಕ್ ಸೈಕ್ಲಿಂಗ್ ನಲ್ಲಿ ಮೊದಲ ಚಿನ್ನ ಗೆದ್ದ ನೆದರ್ಲೆಂಡ್ಸ್‌ನ ಗ್ರೂಟ್
Authored by:
Bhagya R K