* ಭಾರತ ಪುರುಷರ ಹಾಕಿ ತಂಡ ಅತ್ಯಂತ ಕೆಚ್ಛೆದೆಯ ಪ್ರದರ್ಶನ ನೀಡಿ ಬಲಿಷ್ಠ ಗ್ರೇಟ್ ಬ್ರಿಟನ್ ವಿರುದ್ಧ ಗೆದ್ದು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಗೆ ಲಗ್ಗೆ ಹಾಕಿದೆ. ಸೆಮಿಫೈನಲ್ ನಲ್ಲಿ ಅರ್ಜೆಂಟಿನಾ ಅಥವಾ ಜರ್ಮನಿ ತಂಡವನ್ನು ಎದುರಿಸಲಿದೆ. ಒಲಿಂಪಿಕ್ಸ್ ನಲ್ಲಿ ಭಾರತ ಸತತ ಎರಡನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ.
* ಆಗಸ್ಟ್ 4 ರಂದು ಇವ್ಸ್ ಡಿ ಮ್ಯಾನುವಾ ಕ್ರೀಡಾಂಗಣದಲ್ಲಿ ಭಾರತದ ಗೋಡೆ ಎಂದೇ ಖ್ಯಾತರಾಗಿರುವ ಗೋಲ್ ಕೀಪರ್ ಶ್ರೀಜೇಶ್ ರೋಚಕ ಪೆನಾಲ್ಟಿ ಶೂಟೌಟ್ ನಲ್ಲಿ 4-2 ಗೋಲುಗಳ ರೋಚಕ ಗೆಲುವು ಪಡೆಯಿತು. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಭಾರತ ಮತ್ತು ಗ್ರೇಟ್ ಬ್ರಿಟನ್ 1-1 ಸಮಗೊಳಿಸಿದವು.
* ಅಮಿತ್ ರೋಹಿದಾಸ್ ರೆಡ್ ಕಾರ್ಡ್ ಪಡೆದಿದ್ದರಿಂದ ಭಾರತ ಮೂರು ಕ್ವಾರ್ಟರ್ ನಲ್ಲಿ 10 ಆಟಗಾರರೊಂದಿಗೆ ಆಡಿತು. ಫಿಲೀಪ್ ರೋಪರ್ ಹೊಡೆದ ಚೆಂಡನ್ನು ಶ್ರೀಜೇಶ್ ಅದ್ಭುತವಾಗಿ ಹಿಡಿದರು. ರಾಜ್ ಕುಮಾರ್ ಪಾಲ್ ಗೋಲು ಹೊಡೆಯುವ ಮೂಲಕ ಉಪಾಂತ್ಯಕ್ಕೆ ಅರ್ಹತೆ ಪಡೆಯುವಂತೆ ಮಾಡಿದರು.
* ನಾಯಕನ ಆಟವಾಡಿದ ಹರ್ಮನ್ ಪ್ರೀತ್ 22ನೇ ನಿಮಿಷದಲ್ಲಿ ಗೋಲು ಹೊಡೆದರು. 27ನೇ ನಿಮಿಷದಲ್ಲಿ ಗ್ರೇಟ್ ಬ್ರಿಟನ್ ನ ಲೀ ಮೊರ್ಟನ್ ಗೋಲು ಹೊಡೆದು 1-1 ಸಮಗೊಳಿಸಿದರು. ನಾಯಕ ಹರ್ಮನ್ ಪ್ರೀತ್ ಗೋಲು ಹೊಡೆದು 1-1 ಸಮಗೊಳಿಸಿದರು. ವಾಲ್ಲೇಸ್ ಎರಡನೆ ಗೋಲು ಹೊಡೆದರು. ಭಾರತ ಪರ ಸುಖ್ಜಿತ್ 2-2 ಗೋಲು ಹೊಡೆದು ಸಮಗೊಳಿಸಿದರು. ಶ್ರೀಜೇಶ್ ಗೋಲಿನೆದುರು ಬಂಡೆಯಂತೆ ನಿಂತರು. ರಾಜ್ ಕುಮಾರ್ ಗೋಲು ಹೊಡೆದು ಭಾರತವನ್ನು ಸಂಭ್ರಮಿಸುವಂತೆ ಮಾಡಿದರು.
ಪ್ಯಾರಿಸ್ ಒಲಂಪಿಕ್ಸ್: ಸೆಮಿಫೈನಲ್ ಗೆ ಭಾರತ ಪುರುಷರ ಹಾಕಿ ತಂಡ
Published by Jyoti Angadi
05 ಆಗಸ್ಟ್ 2024