* ಮುಂದಿನ ತಿಂಗಳ ಪ್ಯಾರಿಸ್ ಒಲಿಂಪಿಕ್ಸ್ 2024 ಗಾಗಿ ಹಾಕಿ ಇಂಡಿಯಾ 16 ಸದಸ್ಯರ ತಂಡವನ್ನು ಘೋಷಿಸಿದ್ದರಿಂದ ಅನುಭವಿ ಫಾರ್ವರ್ಡ್ ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಜೂನ್ 26 ರಂದು (ಬುಧವಾರ) ನಾಯಕನಾಗಿ ಮತ್ತು ಹಾರ್ದಿಕ್ ಸಿಂಗ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಯಿತು.
* ನೆದರ್ಲೆಂಡ್ಸ್, ಜರ್ಮನಿ, ಬ್ರಿಟನ್, ಸ್ಪೇನ್, ದಕ್ಷಿಣ ಆಫ್ರಿಕಾ ಮತ್ತು ಅತಿಥೇಯ ಫ್ರಾನ್ಸ್ 'ಎ' ಗುಂಪಿನಲ್ಲಿವೆ. ಭಾರತ ತಂಡದ ಆಟಗಾರರು ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ತರಬೇತಿ ಶಿಬಿರದಲ್ಲಿ ಒಲಂಪಿಕ್ಸ್ ಗೆ ಸಿದ್ಧತೆಯಲ್ಲಿದ್ದಾರೆ.
* ಈ ಬಾರಿ ತಂಡದಲ್ಲಿ ಗೋಲ್‌ಕೀಪರ್ ಆಗಿರುವ ಪಿ.ಆರ್.ಶ್ರೀಜೆಶ್ ಹಾಗೂ ಮಿಡ್ ಫೀಲ್ಡರ್ ಮನ್ ಪ್ರೀತ್ ಸಿಂಗ್ ಅವರಿಗೆ ಇದು ನಾಲ್ಕನೇ ಒಲಿಂಪಿಕ್ ಆಗಿದ್ದು, ನಾಯಕ ಹರ್ಮನ್ ಪ್ರೀತ್ ಅವರು ಒಟ್ಟು ಮೂರು ಬಾರಿ ಒಲಿಂಪಿಕ್‌ನಲ್ಲಿ ಅಡಿದ್ದಾರೆ.
* ಡಿಫೆನ್ಸ್‌ನಲ್ಲಿ ಹರ್ಮನ್ ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಸುಮಿತ್ ಹಾಗೂ ಸಂಜಯ್ ಆಡಲಿದ್ದಾರೆ. ಮಿಡ್‌ಫೀಲ್ಡ್‌ನಲ್ಲಿ ಪಾಲ್, ಶಮ್‌ಶೇರ್ ಸಿಂಗ್. ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್ ಹಾಗೂ ವಿವೇಕ್ ಸಾಗರ್ ಪ್ರಸಾದ್ ಆಡಲಿದ್ದಾರೆ.
* ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಕಂಚಿನ ಪದಕ ಗೆದ್ದ ಭಾರತ, ಹಾಲಿ ಚಾಂಪಿಯನ್ ಬೆಲ್ಜಿಯಂ, ಆಸ್ಟ್ರೇಲಿಯಾ, ಅರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ಜೊತೆಗೆ ಪೂಲ್ ಬಿಯಲ್ಲಿ ಸ್ಥಾನ ಪಡೆದಿದೆ.
* ಪೂಲ್‌ನ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಲಿವೆ.
* ಪ್ಯಾರಿಸ್‌ನಲ್ಲಿ ಭಾರತಕ್ಕಾಗಿ ಒಲಿಂಪಿಕ್ಸ್‌ಗೆ ಪಾದಾರ್ಪಣೆ ಮಾಡಲಿರುವ ಐದು ಆಟಗಾರರೆಂದರೆ ಜರ್ಮನ್‌ಪ್ರೀತ್ ಸಿಂಗ್, ಸಂಜಯ್, ರಾಜ್ ಕುಮಾರ್ ಪಾಲ್, ಅಭಿಷೇಕ್ ಮತ್ತು ಸುಖಜೀತ್ ಸಿಂಗ್.
* ಭಾರತ ಎಂಟು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚು ಸೇರಿದಂತೆ ಒಟ್ಟು 12 ಒಲಿಂಪಿಕ್ ಪದಕಗಳನ್ನು ಹೊಂದಿದೆ.
* ಭಾರತ ತಂಡದಲ್ಲಿ
- ಗೋಲ್‌ಕೀಪರ್: ಶ್ರೀಜೆಶ್ ಪರಟ್ಟು ರವೀಂದ್ರನ್
- ಡಿಫೆಂಡರ್‌ಗಳು: ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೊಹಿದಾಸ್, ಹರ್ಮನ್‌ಪ್ರೀತ್ ಸಿಂಗ್, ಸುಮಿತ್, ಸಂಜಯ್
- ಮಿಡ್‌ಫೀಲ್ಡರ್‌ಗಳು: ರಾಜ್‌ಕುಮಾರ್ ಪಾಲ್, ಶಮ್‌ಶೇರ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್
- ಫಾರ್ವರ್ಡ್ : ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್
- ಬದಲಿ ಆಟಗಾರರು: ನೀಲಕಂಠ ಶರ್ಮಾ, ಜುಗರಾಜ್ ಸಿಂಗ್, ಕೃಷ್ಣ ಬಹದ್ದೂರ್ ಪಾಠಕ್.
* ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತದ ಪಂದ್ಯಗಳು :
ಜುಲೈ 27 ನ್ಯೂಜಿಲೆಂಡ್ ವಿರುದ್ಧ
ಜುಲೈ 29 ಅರ್ಜೆಂಟಿನಾ ವಿರುದ್ಧ
ಜುಲೈ 30 ಐರ್ಲೆಂಡ್ ವಿರುದ್ಧ
ಆಗಸ್ಟ್ 1 ಬೆಲ್ಜಿಯಂ ವಿರುದ್ಧ
ಆಗಸ್ಟ್ 2 ಆಸ್ಟೇಲಿಯಾ ವಿರುದ್ಧ
ಗುರುವಾರ, 27 ಜೂನ್ 2024
11:36 ಪೂರ್ವಾಹ್ನ
Daily PDF
ಪ್ಯಾರಿಸ್ ಒಲಂಪಿಕ್ಸ್ : ಭಾರತಕ್ಕೆ ಹರ್ಮನ್ ಪ್ರೀತ್ ನಾಯಕ
Authored by:
Bhagya R K