* ಅಮೆರಿಕದ ನೊವಾ ಲೈಲ್ಸ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅತ್ಯಂತ ರೋಚಕ ಪೈಪೋಟಿ ನಡೆದ ಪುರುಷರ 100 ಮೀಟರ್ ಸ್ಪರ್ಧೆಯನ್ನು ಗೆಲ್ಲುವ ಮೂಲಕ ವಿಶ್ವದ ಅತ್ಯಂತ ವೇಗದ ವ್ಯಕ್ತಿಯಾದರು.
* ಅತ್ಯಂತ ನಿಖಟ ಪೈಪೋಟಿ ಕಂಡ ಸ್ಪರ್ಧೆ ಇದಾಗಿತ್ತು. 9.79 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಲೈಲ್ಸ್ ತಮ್ಮ ಪ್ರತಿಸ್ಪರ್ಧಿ ಜಮೈಕಾದ ಕಿಶಾನೆ ಥಾಮ್ರನ್ ಎದುರು ಅಕ್ಷರಶಃ ಕೂದಲೆಳೆ (0.005 ಸೆಕೆಂಡು) ಅಂತರದಲ್ಲಿ ಗೆದ್ದರು.
* ಫೈನಲ್‌ನಲ್ಲಿದ್ದ ಎಲ್ಲ ಎಂಟು ಸ್ಪರ್ಧಿಗಳು 10 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಗುರಿ ಮುಟ್ಟಿದ್ದು ವಿಶೇಷವಾಗಿತ್ತು. ಇದರಿಂದಾಗಿ ಸ್ಪರ್ಧೆಯ ಮೊದಲ ಮೂವರು ವಿಜೇತರನ್ನು ನಿರ್ಧರಿಸಲು ತೀರ್ಪುಗಾರರು ವಿಡಿಯೊ ದಾಖಲೆಗಳ ವೀಕ್ಷಿಸಬೇಕಾಯಿತು ಬೇಕಾಯಿತು.
* ಲೈಲ್ಸ್ ಮತ್ತು ಜಮೈಕಾದ ಥಾಮ್ರನ್ ಕೂಡ 9.79 ಸೆಕೆಂಡುಗಳಲ್ಲಿ ಓಡಿದ್ದರು. ಆದರೆ ಲೈಲ್ಸ್ ಮತ್ತು ಥಾಯ್ಸನ್ ನಡುವೆ 0.005ರಷ್ಟು ಸೂಕ್ಷ್ಮ ಅಂತರವನ್ನು ಗಮನಿಸಲಾಯಿತು. ರೌಂಡೆಡ್ ಅಪ್ ಟೈಮ್‌ನಲ್ಲಿ ಲೈಲ್ಸ್ (.784) ಪ್ರಥಮ ಸ್ಥಾನ ಪಡೆದರೆ, ಕಿಶಾನೆ (.789) ಬೆಳ್ಳಿ ಹಾಗೂ ಅಮೆರಿಕದ ಫ್ರೆಡ್ ಕೆರ್ಲೆ ಕಂಚಿನ ಪದಕ ಜಯಿಸಿದರು.
* 2004ರ ನಂತರ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ ಅಮೆರಿಕದ ಅಥ್ಲೆಟ್ ಎಂಬ ಹೆಗ್ಗಳಿಕೆಯು ಲೈಲ್ಸ್ ಅವರದ್ದಾಯಿತು. ಅವರು 200 ಮೀ ಓಟದಲ್ಲಿ ಸ್ಪರ್ಧಿಸಲಿದ್ದಾರೆ.
100 ಮೀ.ಓಟ: ಫೈನಲ್ ಸ್ಪರ್ಧೆಯ ಫಲಿತಾಂಶ (ಸೆಕೆಂಡುಗಳಲ್ಲಿ)
1) ನೊವಾ ಲೈಲ್ಸ್ (ಅಮೆರಿಕ) 9.79
2) ಕಿಶಾನೆ ಥಾಮ್ಪನ್(ಜಮೈಕಾ) 9.79
3) ಫ್ರೆಡ್ ಕೆರ್ಲೆ (ಅಮೆರಿಕ) 9.81
4) ಅಶಾನಿ ಸಿಂಬಿನಿ (ದ.ಆಫ್ರಿಕಾ) 9.82
5) ಲಮೊಂಟ್ ಮಾರ್ಸೆಲ್ ಜೇಕಬ್ (ಇಟಲಿ) 9.85
6) ಲೆಟ್ಸಿಲಿ ಟೆಬೊಗೊ (ಬೋತ್ಸವಾನ) 9.86
7) ಕೆನಿ ಬೆಡ್ನರೆಕ್ (ಅಮೆರಿಕ) 9.88
8) ಓಬ್ಲಿಕ್ ಸೆವಿಯೆ (ಜಮೈಕಾ) 9.91
ಮಂಗಳವಾರ, 06 ಆಗಸ್ಟ್ 2024
1:54 ಅಪರಾಹ್ನ
Daily PDF
ಪ್ಯಾರಿಸ್ ಒಲಂಪಿಕ್ಸ್ ; 9.79 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅಮೆರಿಕದ ನೊವಾ ಲೈಲ್ಸ್
Authored by:
Jyoti Angadi